ಓವಲ್ ಟೆಸ್ಟ್ ನಲ್ಲಿ ಭಾರತದ ವಿರುದ್ಧ ಮೋಸದಾಟದ ಆರೋಪ ಹೊರಿಸಿದ ಪಾಕ್ ಕ್ರಿಕೆಟಿಗ

Krishnaveni K

ಬುಧವಾರ, 6 ಆಗಸ್ಟ್ 2025 (08:35 IST)
ಲಂಡನ್: ಇಂಗ್ಲೆಂಡ್ ವಿರುದ್ಧ ದಿ ಓವಲ್ ಮೈದಾನದಲ್ಲಿ ನಡೆದಿದ್ದ ಐದನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೋಸದಾಟದ ಆರೋಪ ಹೊರಿಸಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ರೋಚಕವಾಗಿ 6 ರನ್ ಗಳಿಂದ ಗೆದ್ದುಕೊಂಡಿತ್ತು. ಕೊನೆಯ ದಿನ ಕೇವಲ 30 ಪ್ಲಸ್ ರನ್ ಗಳಿಸಬೇಕಿದ್ದರೂ ಇಂಗ್ಲೆಂಡ್ ಉಳಿದ 4 ವಿಕೆಟ್ ಕಳೆದುಕೊಂಡು ಕೊನೆಯ ಕ್ಷಣದಲ್ಲಿ ಸೋಲೊಪ್ಪಿಕೊಂಡಿತು.

ಆದರೆ ಈ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಮೋಸದಾಟವಾಡಿದ್ದಾರೆ ಎಂದು ಪಾಕ್ ಮಾಜಿ ಕ್ರಿಕೆಟಿಗ ಶಬ್ಬೀರ್ ಅಹ್ಮದ್ ಖಾನ್ ಆರೋಪಿಸಿದ್ದಾರೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಚೆಂಡು ವಿರೂಪಗೊಳಿಸಿದೆ. ನೀವೇ ಗಮನಿಸಬಹುದು, 80 ಪ್ಲಸ್ ಓವರ್ ಗಳ ನಂತರವೂ ಬಾಲ್ ಶೈನ್ ಆಗುತ್ತಿತ್ತು. ಅಂದರೆ ಅದಕ್ಕೆ ಟೀಂ ಇಂಡಿಯಾ ವ್ಯಾಸಲಿನ್ ಜೆಲ್ ಉಜ್ಜಿ ಹೊಳಪು ಮೂಡಿಸಿರಬಹುದು. ಈ ಬಾಲ್ ನ್ನು ಅಂಪಾಯರ್ ಗಳು ಪರೀಕ್ಷೆಗೊಳಪಡಿಸಬೇಕು ಎಂದು ಶಬ್ಬೀರ್ ಸಂಶಯ ಪಟ್ಟಿದ್ದಾರೆ.

ಅವರ ಈ ಟ್ವೀಟ್ ನ್ನು ಭಾರತೀಯರು ಇನ್ನಿಲ್ಲದಂತೆ ಟ್ರೋಲ್ ಮಾಡಿದ್ದಾರೆ. ಹೌದೌದು ನಾವು ಆಪರೇಷನ್ ಸಿಂಧೂರ್ ಸಮಯದಲ್ಲಿ ಬ್ರಹ್ಮೋಸ್ ಕ್ಷಿಪಣಿಗೆ ವ್ಯಾಸಲಿನ್ ಉಜ್ಜಿ ಕಳುಹಿಸಿದ್ದೆವು ಎಂದು ಒಬ್ಬರು ಹೇಳಿದ್ದರೆ, ಇನ್ನೊಬ್ಬರು ಭಾರತದ ಗೆಲುವು ಇಷ್ಟೊಂದು ಉರಿತಿದೆ ಎಂದರೆ ಮೊದಲು ನೀನು ವ್ಯಾಸಲಿನ್ ಹಚ್ಚಿಕೋ, ತಂಪಾಗಿರುತ್ತದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ