ಬಾಗಲಕೋಟೆಯ ವಿದ್ಯಾರ್ಥಿನಿಯ ಸಂಕಷ್ಟಕ್ಕೆ ಮಿಡಿದ ಸ್ಟಾರ್ ಕ್ರಿಕೆಟಿಗನ ಹೃದಯ, ಮಾಡಿದ್ದೇನು ಗೊತ್ತಾ

Sampriya

ಮಂಗಳವಾರ, 5 ಆಗಸ್ಟ್ 2025 (18:59 IST)
Photo Credit X
ಬಾಗಲಕೋಟೆ : ಕರ್ನಾಟಕದ ಪ್ರತಿಭಾವಂತ ವಿದ್ಯಾರ್ಥಿನಿ ವಿದ್ಯಾಭ್ಯಾಸಕ್ಕೆ ಟೀಂ ಇಂಡಿಯಾ ಕ್ರಿಕೆಟರ್‌ ರಿಷಭ್ ಪಂತ್ ಸಹಾಯದ ಹಸ್ತ ಚಾಚಿದ್ದು,. ಪಂತ್‌ ಮಾನವೀಯ ಗುಣಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. 

ಕ್ರಿಕೆಟಿಗನಿಂದ ನೆರವಿನ ಹಸ್ತವನ್ನು ಪಡೆದುಕೊಂಡ ಬಾಲಕಿಯನ್ನು ಬಾಗಲಕೋಟೆಯ ವಿದ್ಯಾರ್ಥಿನಿ ಜ್ಯೋತಿ ಕಣಬೂರ್ ಎಂದು ಗುರುತಿಸಲಾಗಿದೆ. 

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ರಬಕವಿ ಗ್ರಾಮದ ತೀರ್ಥಯ್ಯ ಹಾಗೂ ರೂಪಾ ದಂಪತಿಗಳ ಮಗಳು. 

ಗ್ರಾಮದಲ್ಲಿ ಚಿಕ್ಕ ಹೋಟೆಲ್ ಇರಿಸಿಕೊಂಡು 4 ಮಕ್ಕಳೊಂದಿಗೆ ತೀರ್ಥಯ್ಯ ಬದುಕು ನಡೆಸುತ್ತಿದ್ದಾರೆ. ಪಿಯುಸಿ ವಾಣಿಜ್ಯ ವಿಭಾಗದಲ್ಲಿ 85% ಪಡೆದ ಜ್ಯೋತಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಂಕಷ್ಟ ಎದುರಾಯಿತು. 

ಆಗ ತಂದೆ ತೀರ್ಥಯ್ಯ ಗ್ರಾಮದ ಅನಿಲ್ ಹುಣಸಿಕಟ್ಟಿ ಅವರ  ಬಳಿ ಹೇಳಿಕೊಂಡಿದ್ದಾರೆ. ಜ್ಯೋತಿಗೆ ಶಿಕ್ಷಣದ ಮೇಲಿನ ಆಸಕ್ತಿ ಕೇಳಿ ಅವರು ಬೆಂಗಳೂರಿನ ಐಪಿಎಲ್ ನಲ್ಲಿ ಕಾರ್ಯನಿರ್ವಹಿಸುವ ತಮ್ಮ ಸ್ನೇಹಿತರ ಮೂಲಕ ಕ್ರಿಕೆಟಿಗ ರಿಷಬ್ ಪಂತ್‌ ಅವರನ್ನು ಸಂಪರ್ಕಿಸಿದ್ದಾರೆ. 

ತಕ್ಷಣವೇ ಸ್ಪಂದಿಸಿದ ರಿಷಬ್ ಅವರು  ನೇರವಾಗಿ ಜ್ಯೋತಿ ಕಲಿಯಬೇಕಿದ್ದ ಕಾಲೇಜಿಗೆ ₹40ಸಾವಿರ ಹಣವನ್ನು ಪಾವತಿಸಿದ್ದಾರೆ. 

ರಿಷಬ್ ನೆರವಿನ ಹಿನ್ನೆಲೆಯಲ್ಲಿ ಬಿಎಲ್ ಡಿ ಸಂಸ್ಥೆಯಿಂದ ಅಭಿನಂದನಾ ಪತ್ರವನ್ನ ಬರೆಯಲಾಗಿದ್ದು, ರಿಷಬ್ ಪಂತ್‌ ಅವರ ಕಾರ್ಯ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ