‘ರಾಷ್ಟ್ರೀಯ ತಂಡಕ್ಕೆ ಮರಳಲು ಐಪಿಎಲ್ ನಲ್ಲಿ ಆಡುವುದು ಸ್ವಾರ್ಥ’

ಸೋಮವಾರ, 8 ಮೇ 2017 (12:29 IST)
ನವದೆಹಲಿ: ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಲಿರುವ ಟೀಂ ಇಂಡಿಯಾದ ಆಯ್ಕೆ ಇಂದು ನಡೆಯಲಿದೆ. ಈ ಸಂದರ್ಭದಲ್ಲಿ ಟೀಂ ಇಂಡಿಯಾಕ್ಕೆ ಆಯ್ಕೆಯಾಗುವ ವಿಶ್ವಾಸವಿದೆಯೇ ಎಂದು ಕೇಳಿದ್ದಕ್ಕೆ ಗೌತಮ್ ಗಂಭೀರ್ ಈ ರೀತಿ ಹೇಳಿದ್ದಾರೆ.

 
ಐಪಿಎಲ್ ನಲ್ಲಿ ಉತ್ತಮವಾಗಿ ಆಡುವುದು ಟೀಂ ಇಂಡಿಯಾಕ್ಕೆ ಆಯ್ಕೆಯಾಗಲು ಎಂದರೆ ಸ್ವಾರ್ಥವೆನಿಸುತ್ತದೆ. ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿ ಐಪಿಎಲ್ ನಲ್ಲಿ ಆಡಿದ್ದ ಗೌತಮ್ 12 ಪಂದ್ಯಗಳಿಂದ 425 ರನ್ ಮಾಡಿದ್ದಾರೆ.

ಟೀಂ ಇಂಡಿಯಾದಲ್ಲಿ ಆರಂಭಿಕನ ಸ್ಥಾನ ಖಾಲಿಯಿದ್ದು, ಆ ಸ್ಥಾನಕ್ಕೆ ಗಂಭೀರ್ ಆಯ್ಕೆಯಾಗಬೇಕೆಂದು ಒತ್ತಾಯಗಳು ಕೇಳಿಬರುತ್ತಿವೆ. ಈ ಹಿನ್ನಲೆಯಲ್ಲಿ ಗಂಭೀರ್ ಸ್ಪಷ್ಟನೆ ನೀಡಿದ್ದಾರೆ.

‘ಒಂದು ವೇಳೆ ನಾನು ಚಾಂಪಿಯನ್ಸ್ ಟ್ರೋಫಿ ದೃಷ್ಟಿಯಲ್ಲಿಟ್ಟುಕೊಂಡೇ ರನ್ ಗಳಿಸಿದ್ದರೆ ಅದು ತುಂಬಾ ಸ್ವಾರ್ಥವೆನಿಸುತ್ತದೆ. ಹಾಗೆ ನೋಡಿದರೆ ಕೆಕೆಆರ್ ತಂಡದ ಎಲ್ಲಾ ಆಟಗಾರರನ್ನು ಅದೇ ರೀತಿಯಲ್ಲಿ ನೋಡಬೇಕಾಗುತ್ತದೆ. ಆದರೆ ಅದು ಹಾಗಲ್ಲ. ಇಂದಿನ ಪಂದ್ಯದಲ್ಲಿ ಚೆನ್ನಾಗಿ ಆಡುವುದಷ್ಟೇ ನಮ್ಮ ಕರ್ತವ್ಯ. ಮುಂದಿನದು ತಾನಾಗೇ ಆಗುತ್ತದೆ’ ಎಂದು ಗಂಭೀರ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ