ಇಮ್ರಾನ್, ವಾಸಿಂ, ವಾಖರ್ ಬೌಲಿಂಗ್ ಧೂಳೀಪಟ ಮಾಡಿದ 18 ವರ್ಷದ ಸಚಿನ್(ವಿಡಿಯೊ)

ಮಂಗಳವಾರ, 19 ಜುಲೈ 2016 (18:20 IST)
ಭಾರತದ ಬ್ಯಾಟಿಂಗ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರ ಟೆಸ್ಟ್ ವೃತ್ತಿಜೀವನ ಅಬ್ಬರ ಆಟದಿಂದ ಆರಂಭವಾಗಲಿಲ್ಲ. ಅವರ ವೃತ್ತಿಜೀವನದ ಮೊದಲೆರಡು ಇನ್ನಿಂಗ್ಸ್‌ಗಳಲ್ಲಿ  ಶೂನ್ಯಕ್ಕೆ ಔಟಾಗಿದ್ದರು. ಆದಾಗ್ಯೂ, ಕಳಪೆ ಆರಂಭದಿಂದ ಮಾಸ್ಟರ್ ಬ್ಲಾಸ್ಟರ್ ಸಾಕಷ್ಟು ಕಲಿತು ಆಟದ ಲೆಜೆಂಡ್ ಆಗಿ ಹೆಸರು ಗಳಿಸಿದರು.

 1991ರಲ್ಲಿ ಪಾಕಿಸ್ತಾನದ ವಿರುದ್ಧ ಒಂದು ಟೆಸ್ಟ್‌ನಲ್ಲಿ ತೆಂಡೂಲ್ಕರ್ ಇಮ್ರಾನ್ ಖಾನ್, ವಾಸಿಂ ಅಕ್ರಮ ಮತ್ತು ವಖಾರ್ ಯೂನಿಸ್ ಬೌಲಿಂಗ್‌ನಲ್ಲಿ ಮೈದಾನದ ಎಲ್ಲಾ ದಿಕ್ಕುಗಳಿಗೂ ಚೆಂಡನ್ನು ಹೊಡೆದಿದ್ದರು.
 
257 ರನ್ ಬೆನ್ನಟ್ಟಿದ ಭಾರತ ಅಜರುದ್ದೀನ್ ಔಟಾಗಿ ಮೂರು ವಿಕೆಟ್ ಬಿದ್ದಾಗ ಸ್ಕೋರು 134 ರನ್‌ಗಳಾಗಿತ್ತು.  ಸಂಜಯ್ ಮಂಜ್ರೇಕರ್ ಮತ್ತು ತೆಂಡೂಲ್ಕರ್ ನಾಲ್ಕನೇ ವಿಕೆಟ್‌ಗೆ ಸದೃಢ 85 ರನ್ ಜತೆಯಾಟದಿಂದ ಇನ್ನಿಂಗ್ಸ್‌ಗೆ ಚೇತರಿಕೆ ನೀಡಿದರು.
ಆಗ ಇನ್ನೂ ಹದಿಹರೆಯದಲ್ಲಿದ್ದ ತೆಂಡೂಲ್ಕರ್ ತಮ್ಮ 38 ಎಸೆತಗಳಲ್ಲಿ 49 ರನ್ ಸ್ಕೋರಿನಲ್ಲಿ ಕೆಲವು ಮನೋಜ್ಞ ಶಾಟ್‌ಗಳನ್ನು ಹೊಡೆದು ಸದೃಢ ಪಾಕಿಸ್ತಾನಿ ಬೌಲಿಂಗ್ ದಾಳಿಗೆ ಅಚ್ಚರಿ ಹುಟ್ಟಿಸಿದ್ದರು. 
 

ವೆಬ್ದುನಿಯಾವನ್ನು ಓದಿ