ಶತಕ ಗಳಿಸಲು ಪ್ರಕ್ರಿಯೆ, ಸಿದ್ಧತೆ ಮುಖ್ಯ: ಅಜಿಂಕ್ಯಾ ರಹಾನೆ

ಮಂಗಳವಾರ, 2 ಆಗಸ್ಟ್ 2016 (11:47 IST)
ಅಜಿಂಕ್ಯಾ ರಹಾನೆ ಕಠಿಣ ಸನ್ನಿವೇಶಗಳಲ್ಲಿ ಬ್ಯಾಟಿಂಗ್‌ಗೆ ಕೊಡುಗೆ ನೀಡುವ ಬ್ಯಾಟ್ಸ್‌ಮನ್ ಆಗಿ ನೆಲೆಗೊಂಡಿದ್ದಾರೆ. ಜಮೈಕಾದಲ್ಲಿನ ಎರಡನೇ ಟೆಸ್ಟ್‌ನಲ್ಲಿ ಕಳೆದ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ತಮ್ಮ ಮೂರನೇ ಶತಕವನ್ನು ರಹಾನೆ ದಾಖಲಿಸಿ ಭಾರತವನ್ನು ಸುಭದ್ರ ಸ್ಥಾನದಲ್ಲಿ ಇರಿಸಿದರು. ಈ ಭವ್ಯ ಶತಕದಿಂದ ರಹಾನೆ ಅಪರೂಪದ ಸಾಧನೆ ಮಾಡಿದ್ದು ಸತತ 8 ಸರಣಿಯ  ಟೆಸ್ಟ್‌ಪಂದ್ಯದಲ್ಲಿ ಕನಿಷ್ಟ ಒಂದು ಇನ್ನಿಂಗ್ಸ್‌ನಲ್ಲಿ 90 ರನ್ ಸ್ಕೋರ್ ಮಾಡಿದ ಮೊದಲ ಬ್ಯಾಟ್ಸ್‌ಮನ್ ಎಂಬ ಶ್ರೇಯಕ್ಕೆ ಪಾತ್ರರಾದರು.
 
ಮೂಲಭೂತ ಅಂಶಗಳನ್ನು ಸರಿಯಾಗಿ ಅನುಸರಿಸಿದರೆ, ಫಲಿತಾಂಶ ತಾನಾಗೇ ಬರುತ್ತದೆ. ವಿದೇಶದಲ್ಲಾಗಲೀ ಅಥವಾ ಸ್ವದೇಶದಲ್ಲಾಗಲೀ, ಪ್ರಕ್ರಿಯೆ ಮತ್ತು ಸಿದ್ಧತೆ ಮುಖ್ಯವಾಗುತ್ತದೆ. ನಾನು ಶತಕಗಳನ್ನು ಬಾರಿಸುವ ಕುರಿತು ಯೋಚಿಸುವುದಿಲ್ಲ, ಫಲಿತಾಂಶ ತಾನೇತಾನಾಗಿ ಬರುತ್ತದೆ. ನಾವು ಸರಿಯಾಗಿ ಸಿದ್ಧತೆ ಮಾಡಿಕೊಂಡರೆ ಫಲಿತಾಂಶ ಅನುಸರಿಸುತ್ತದೆ ಎಂದು ರಹಾನೆ ಹೇಳಿದ್ದಾರೆ. 
 
 ರಹಾನೆ ಅವರು 2013ರಲ್ಲಿ  ದಕ್ಷಿಣ ಆಫ್ರಿಕಾಗೆ ಭಾರತದ ಪ್ರವಾಸದಲ್ಲಿ ಡರ್ಬನ್‌ನಲ್ಲಿ 96 ರನ್ ಗಳಿಸಿದ್ದರು. 2014 ಫೆಬ್ರವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಚೊಚ್ಚಲ ಶತಕವನ್ನು ಬಾರಿಸಿದ್ದರು. ಇಂಗ್ಲೆಂಡ್‌ ವಿರುದ್ಧ ಲಾರ್ಡ್ಸ್‌ನಲ್ಲಿ 103 ರನ್ ಗಳಿಸಿ, ಆಸ್ಟ್ರೇಲಿಯಾ ವಿರುದ್ಧ ಮೆಲ್ಬರ್ನ್‌ನಲ್ಲಿ 147 ರನ್ ಸಿಡಿಸಿದ್ದರು. 2015ರಲ್ಲಿ ಬಾಂಗ್ಲಾ ವಿರುದ್ಧ 98 ರನ್ ಗಳಿಸಿ 2 ರನ್‌ಗಳಿಂದ ಶತಕ ವಂಚಿತರಾಗಿದ್ದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ