ವಿರಾಟ್ ಕೊಹ್ಲಿ ಮಗು ಆಸ್ಟ್ರೇಲಿಯಾದಲ್ಲೇ ಹುಟ್ಟಲಿ ಎಂಬುದು ಅಲನ್ ಬಾರ್ಡರ್ ಆಸೆಯಂತೆ!

ಭಾನುವಾರ, 22 ನವೆಂಬರ್ 2020 (09:22 IST)
ಸಿಡ್ನಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸದ್ಯದಲ್ಲೇ ತಂದೆಯಾಗಲಿದ್ದಾರೆ. ಅಂದ ಹಾಗೆ ಕೊಹ್ಲಿ ಮಗುವಿನ ಬಗ್ಗೆ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಅಲನ್ ಬಾರ್ಡರ್ ಕೂಡಾ ಆಸೆಯೊಂದನ್ನು ಹೊರಹಾಕಿದ್ದಾರೆ.
 

ಕೊಹ್ಲಿ ಮಗು ಆಸ್ಟ್ರೇಲಿಯಾದಲ್ಲೇ ಜನನವಾಗಲಿ. ಆ ಮೂಲಕ ನಾವು ಕೊಹ್ಲಿ ಮಗುವನ್ನು ಆಸ್ಟ್ರೇಲಿಯಾ ಸಂಜಾತ ಎಂದು ಹೇಳಿಕೊಳ್ಳಬಹುದು ಎಂದು ಬಾರ್ಡರ್ ಸಂದರ್ಶನವೊಂದರಲ್ಲಿ ತಮಾಷೆಯಾಗಿ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಕೊಹ್ಲಿ ಆಸ್ಟ್ರೇಲಿಯಾದಲ್ಲಿದ್ದು, ಅನುಷ್ಕಾ ಹೆರಿಗೆ ವೇಳೆಗೆ ಭಾರತಕ್ಕೆ ಮರಳಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ