ಪಾಕಿಸ್ತಾನ ಕ್ರಿಕೆಟಿಗನಿಗೆ ವೈದ್ಯರಿಗೂ ಮಾಡಲಾಗದ ನೆರವು ಮಾಡಿದ್ದ ಅನಿಲ್ ಕುಂಬ್ಳೆ!

ಸೋಮವಾರ, 13 ಏಪ್ರಿಲ್ 2020 (10:08 IST)
ನವದೆಹಲಿ: ಅಪ್ಪಟ ಕನ್ನಡಿಗ, ಟೀಂ ಇಂಡಿಯಾ ಸ್ಪಿನ್ ಗಾರುಡಿಗ ಅನಿಲ್ ಕುಂಬ್ಳೆ ಹಿಂದೊಮ್ಮೆ ಪಾಕಿಸ್ತಾನ ಸ್ಪಿನ್ನ ರ್ ಸಕ್ಲೇನ್ ಮುಷ್ತಾಕ್ ರಿಗೆ ವೈದ್ಯರಿಗೂ ಸಾಧ್ಯವಾಗದ ಸಹಾಯ ಮಾಡಿದ್ದರಂತೆ.


ಈ ಬಗ್ಗೆ ಸ್ವತಃ ಸಕ್ಲೇನ್ ಮುಷ್ತಾಕ್ ಈಗ ಹೇಳಿಕೊಂಡಿದ್ದಾರೆ. ವೈದ್ಯರಿಗೂ ನನ್ನ ಸಮಸ್ಯೆ ಸರಿಪಡಿಸಲಾಗದೇ ಇದ್ದಾಗ ‘ಅಣ್ಣ’ ಅನಿಲ್ ಕುಂಬ್ಳೆ ನನಗೆ ಸಹಾಯ ಮಾಡಿದ್ದರು ಎಂದಿದ್ದಾರೆ.

ನನಗೆ ಕಣ್ಣಿನ ಸಮಸ್ಯೆಯಿತ್ತು. ಯಾವ ವೈದ್ಯರಿಂದಲೂ ಸರಿಪಡಿಸಲು ಸಾ‍ಧ್ಯವಾಗಿರಲಿಲ್ಲ. ಆಗ ನಾನು ಅನಿಲ್ ಕುಂಬ್ಳೆ ಬಳಿ ನನ್ನ ಕಷ್ಟ ಹೇಳಿಕೊಂಡೆ. ಸಹೋದರ ಕುಂಬ್ಳೆ ನನ್ನ ಡಾ. ಭರತ್ ರೂಗಾನಿ ಎಂಬವರ ದೂರವಾಣಿ ಸಂಖ್ಯೆ ನೀಡಿದರಲ್ಲದೆ, ತಾವು ಮತ್ತು ಗಂಗೂಲಿ ಇದೇ ವೈದ್ಯರ ಬಳಿ ಸಲಹೆ ಪಡೆದಿದ್ದೆವು ಎಂದಿದ್ದರು. ಅವರ ನೆರವಿನಿಂದ ನನ್ನ ಸಮಸ್ಯೆ ಪರಿಹಾರವಾಯಿತು ಎಂದು ಕುಂಬ್ಳೆಗೆ ಹೊಗಳಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ