ಅನುಷ್ಕಾ ಶರ್ಮಾ ಮುತ್ತಿನ ಗಮ್ಮತ್ತಿಗೆ ನೆಟ್ಟಿಗರೇ ಫಿದಾ! ಇನ್ನು ವಿರಾಟ್ ಕೊಹ್ಲಿಯ ಕೇಳಬೇಕೇ?!

ಶುಕ್ರವಾರ, 6 ನವೆಂಬರ್ 2020 (11:51 IST)
ದುಬೈ: ವಿರಾಟ್ ಕೊಹ್ಲಿ ಜನ್ಮದಿನದಂದು ಪತ್ನಿ, ನಟಿ ಅನುಷ್ಕಾ ಶರ್ಮಾ ತಮ್ಮಿಬ್ಬರ ಸುಂದರ ಕ್ಷಣಗಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ನೆಟ್ಟಿಗರು ಇವರಿಬ್ಬರ ಜೋಡಿಯ ಪ್ರೀತಿಗೆ ಫಿದಾ ಆಗಿದ್ದಾರೆ.


ವಿರಾಟ್ ರನ್ನು ತಬ್ಬಿಕೊಂಡು ಅನುಷ್ಕಾ  ಮುತ್ತಿಕ್ಕುವ ಫೋಟೋ ಪ್ರಕಟಿಸಿ ಬರ್ತ್ ಡೇ ವಿಶ್ ಮಾಡಿದ್ದಾರೆ. ಈ ಫೋಟೋಗಳನ್ನು ನೋಡಿ ನೆಟ್ಟಿಗರು ನೀವ್ಯಾಕೆ ಇಷ್ಟು ಕ್ಯೂಟ್ ಆಗಿದ್ದೀರಿ? ನಿಮ್ಮ ಜೋಡಿ ಎಷ್ಟು ಮುದ್ದು ಎಂದು ಕೊಂಡಾಡಿದ್ದಾರೆ. ಇನ್ನು, ವಿರಾಟ್ ಕೂಡಾ ಪತ್ನಿಯ ಈ ಪ್ರೀತಿಯ ಚುಂಬನವನ್ನು ಲೈಕ್ ಮಾಡಿದ್ದಾರೆ. ನಿಮ್ಮಿಬ್ಬರದ್ದು ದೇವರೇ ಮಾಡಿದ ಜೋಡಿ ಎಂದು ನೆಟ್ಟಿಗರು ಹರಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ