ದಿಗ್ವಿಜಯ ಸಾಧಿಸಿ ಮನೆಗೆ ಬಂದ ಪತಿ ವಿರಾಟ್ ಕೊಹ್ಲಿಗೆ ಅನುಷ್ಕಾ ಸ್ವಾಗತ ನೀಡಿದ್ದು ಹೀಗೆ!

ಸೋಮವಾರ, 25 ನವೆಂಬರ್ 2019 (10:07 IST)
ಮುಂಬೈ: ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಮಾಡಿ ತವರಿಗೆ ಮರಳಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಪತ್ನಿ ಅನುಷ್ಕಾ ಶರ್ಮಾರಿಂದ ಆತ್ಮೀಯ ಸ್ವಾಗತ ಸಿಕ್ಕಿದ್ದಾರೆ.


ಬಾಂಗ್ಲಾದೇಶ ವಿರುದ್ಧ ಹೊನಲು ಬೆಳಕು ಟೆಸ್ಟ್ ಪಂದ್ಯ ಮೂರೇ ದಿನಕ್ಕೆ ಇನಿಂಗ್ಸ್ ಅಂತರದಿಂದ ಗೆದ್ದ ಕೊಹ್ಲಿ ನಿನ್ನೆ ರಾತ್ರಿಯೇ ಕೋಲ್ಕೊತ್ತಾದಿಂದ ತವರು ಮುಂಬೈಗೆ ಆಗಮಿಸಿದ್ದಾರೆ.

ಈ ವೇಳೆ ಸ್ವತಃ ಅನುಷ್ಕಾ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದು ಪತಿಯನ್ನು ಸ್ವಾಗತಿಸಿದ್ದಾರೆ. ಈ ಜೋಡಿಯ ಆ ಖುಷಿಯ ಕ್ಷಣಗಳ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ