ಬೌಲ್ಡ್ ಆದರೂ ಡಿಆರ್ ಎಸ್ ಪಡೆದಿದ್ದ ಬಾಂಗ್ಲಾ ಬ್ಯಾಟ್ಸ್ ಮನ್ !

ಮಂಗಳವಾರ, 14 ಮಾರ್ಚ್ 2017 (09:37 IST)
ಢಾಕಾ:  ಜಾಗತಿಕ ಕ್ರಿಕೆಟ್ ನಲ್ಲಿ ಈಗ ಡಿಆರ್ ಎಸ್ ನಿಯಮದ್ದೇ ಚರ್ಚೆ. ಅದರ ಸದ್ಬಳಕೆ, ದುರ್ಬಳಕೆ, ತಲೆ ಬುಡವಿಲ್ಲದೆ ಬಳಕೆ ಮಾಡುವುದರಿಂದ ಹಿಡಿದು ಡಿಆರ್ ಎಸ್ ಬಹು ಚರ್ಚಿತ ವಿಷಯ.

 
ಆದರೆ ಬಾಂಗ್ಲಾದೇಶ ಬ್ಯಾಟ್ಸ್ ಮನ್ ಗಳು ಡಿಆರ್ ಎಸ್ ತೆಗೆದುಕೊಳ್ಳುವ ವಿಚಾರದಲ್ಲಿ ನೆರೆಯ ಪಾಕಿಸ್ತಾನವನ್ನೂ ಮೀರಿಸಿದ್ದಾರೆ. ಪಾಕಿಸ್ತಾನ ನಾಯಕ ಮಿಸ್ಬಾ ಉಲ್ ಹಕ್, ಆಸ್ಟ್ರೇಲಿಯಾದಲ್ಲಿ ಮಾರು ದೂರ ಚೆಂಡು ಹೋಗುತ್ತಿದ್ದರೂ, ಕ್ಯಾಚಿಂಗ್ ಗೆ ಡಿಆರ್ ಎಸ್ ತೆಗೆದುಕೊಂಡು ನಗೆಪಾಟಲಿಗೀಡಾಗಿದ್ದರು.

ಆದರೆ ಬಾಂಗ್ಲಾ ಬ್ಯಾಟ್ಸ್ ಮನ್ ಸೌಮ್ಯ ಸರ್ಕಾರ್ ಬೌಲ್ಡ್ ಆದರೂ, ಡಿಆರ್ ಎಸ್ ಪಡೆದು ಸುದ್ದಿಯಾಗಿದ್ದಾರೆ. ಇದು ನಡೆದಿದ್ದು, ಶ್ರೀಲಂಕಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ. ಅಸೇಲಾ ಗುಣರತ್ನೆ ಬೌಲಿಂಗ್ ನಲ್ಲಿ ಬೌಲ್ಡ್ ಆದ ಸರ್ಕಾರ್  ಡಿಆರ್ ಎಸ್ ಗೆ ಮನವಿ ಸಲ್ಲಿಸಿ ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರ ಅಣಕಕ್ಕೆ ಗುರಿಯಾದರು.

ಬಾಂಗ್ಲಾ ಬ್ಯಾಟ್ಸ್ ಮನ್ ನ ಈ ಹೆಡ್ಡುತನಕ್ಕೆ ಸಾಮಾಜಿಕ ಜಾಲತಾಣದಲ್ಲೂ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇದು ನಾಳೆಯಿಂದ ನೂರನೇ ಟೆಸ್ಟ್ ಪಂದ್ಯವಾಡಲಿರುವ ಬಾಂಗ್ಲಾದೇಶವನ್ನು ಮುಜುಗರಕ್ಕೀಡು ಮಾಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ