ವಿಶ್ರಾಂತಿ ಬೇಕಿದ್ರೆ ಒಂದು ತಿಂಗಳ ಕ್ರಿಕೆಟ್ ಆಡ್ಬೇಡ!

ಸೋಮವಾರ, 27 ನವೆಂಬರ್ 2017 (08:44 IST)
ಮುಂಬೈ: ಬಿಡುವಿಲ್ಲದ ಕ್ರಿಕೆಟ್ ವೇಳಾಪಟ್ಟಿ ವಿರುದ್ಧ ಸಿಡಿದೆದ್ದಿದ್ದ ಕ್ಯಾಪ್ಟನ್ ಕೊಹ್ಲಿಗೆ ಬಿಸಿಸಿಐ ಧಾರಾಳತನ ತೋರಿದ್ದು, ದ. ಆಫ್ರಿಕಾ ಸರಣಿಗೆ ಮೊದಲು ಲಂಕಾ ವಿರುದ್ಧದ ಕೆಲ ಪಂದ್ಯಗಳಿಗೆ ವಿಶ್ರಾಂತಿ ನೀಡಲಿದೆ.
 

ಲಂಕಾ ವಿರುದ್ಧ ಇನ್ನು ಒಂದು ಟೆಸ್ಟ್ ಮತ್ತು ಏಕದಿನ, ಟಿ20 ಸರಣಿಗಳಿದ್ದು, ಈ ಪಂದ್ಯಗಳಿಗೆ ಇಂದು ತಂಡದ ಆಯ್ಕೆ ನಡೆಯಲಿದೆ. ಈ ಸಂದರ್ಭದಲ್ಲಿ ಕೊಹ್ಲಿಗೆ ಒಂದು ತಿಂಗಳ ಮಟ್ಟಿಗೆ ವಿಶ್ರಾಂತಿ ನೀಡುವ ಸಂಭವವಿದೆ.

ಹೀಗಾದಲ್ಲಿ ಕೊಹ್ಲಿ ಲಂಕಾ ವಿರುದ್ಧದ ಉಳಿದ ಪಂದ್ಯಗಳಿಗೆ ಅಲಭ್ಯರಾಗುತ್ತಾರೆ. ಅವರ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾಗೆ ನಾಯಕತ್ವ ವಹಿಸುವ ಸಾಧ್ಯತೆಯಿದೆ. ಜನವರಿಯಲ್ಲಿ ದ. ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರವಾಸ ಮಾಡಲಿದ್ದು,  ಆ ವೇಳೆಗೆ ಕೊಹ್ಲಿ ರಿಲ್ಯಾಕ್ಸ್ ಆಗಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ