ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ನಡುವಿನ ಮುನಿಸಿನ ಇಫೆಕ್ಟ್! ಇನ್ಮುಂದೆ ಟೀಂ ಇಂಡಿಯಾಗೆ ಇಬ್ಬರು ನಾಯಕರು?

ಮಂಗಳವಾರ, 16 ಜುಲೈ 2019 (09:45 IST)
ಮುಂಬೈ: ವಿಶ್ವಕಪ್ ಸೆಮಿಫೈನಲ್ ನಲ್ಲಿ ಆಘಾತಕಾರಿಯಾಗಿ ಹೊರಬಿದ್ದ ಬೆನ್ನಲ್ಲೇ ಟೀಂ ಇಂಡಿಯಾ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿ ಹೊರಬಿದ್ದಿತ್ತು.


ಇದರಿಂದಾಗಿ ಟೀಂ ಇಂಡಿಯಾ ಈಗ ಎರಡು ಭಾಗವಾಗಿದೆ ಎನ್ನಲಾಗಿದೆ. ಕೆಲವು ಆಟಗಾರರ ಗುಂಪು ರೋಹಿತ್ ಶರ್ಮಾರನ್ನು ಬೆಂಬಲಿಸುತ್ತಿದ್ದರೆ ಇನ್ನು ಕೆಲವರು ವಿರಾಟ್ ಕೊಹ್ಲಿಯನ್ನು ಬೆಂಬಲಿಸುತ್ತಿದ್ದಾರೆ.

ಹೀಗಾಗಿ ಈ ವೈಮನಸ್ಯ ತೀವ್ರವಾಗಿ ತಂಡದ ಮೇಲೆ ಪರಿಣಾಮ ಬೀರದಂತೆ ಬಿಸಿಸಿಐ ಸೂತ್ರವೊಂದನ್ನು ಹೆಣೆಯುತ್ತಿದೆ. ಇಬ್ಬರೂ ವಿಶ್ವ ಖ್ಯಾತಿ ಬ್ಯಾಟ್ಸ್ ಮನ್ ಗಳು. ಹೀಗಾಗಿ ಇಬ್ಬರಲ್ಲಿ ಯಾರಿಗೂ ಅನ್ಯಾಯ ಮಾಡುವಂತಿಲ್ಲ. ಹಾಗಾಗಿ ರೋಹಿತ್ ಗೆ ಕೆಲವು ಏಕದಿನ ಪಂದ್ಯಗಳ ನಾಯಕತ್ವ ವಹಿಸಲು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಬಗ್ಗೆ ಬಿಸಿಸಿಐ ಆಡಳಿತ ಮಂಡಳಿ ಕರೆದಿರುವ ವಿಶ್ವಕಪ್ ರಿವ್ಯೂ ಮೀಟಿಂಗ್ ನಲ್ಲಿ ಕೋಚ್ ರವಿಶಾಸ್ತ್ರಿ ಮತ್ತು ನಾಯಕ ಕೊಹ್ಲಿ ಎದುರೂ ಪ್ರಸ್ತಾಪವಾಗುವ ಸಾಧ್ಯತೆಯಿದೆ. ಹೀಗಾಗಿ ಮುಂದೊಂದು ದಿನ ಟೀಂ ಇಂಡಿಯಾಗೆ ಇಬ್ಬರು ನಾಯಕರಾದರೂ ಅಚ್ಚರಿಯಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ