ಭಾರತ ಸರಣಿಗೂ ಮೊದಲೇ ನಿವೃತ್ತಿಯಾದ ಆಸ್ಟ್ರೇಲಿಯಾದ ಈ ಕ್ರಿಕೆಟಿಗ!
ಕಳೆದ ನವಂಬರ್ ನಲ್ಲಿ ಶೆಫೀಲ್ಡ್ ಶೀಲ್ಡ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಡುತ್ತಿರುವಾಗ ಕ್ಯಾಮ್ ಸ್ಟೀವ್ ಸನ್ ಬೌನ್ಸರ್ ತಪ್ಪಿಸಲು ಹೋಗಿ ತಲೆಗೆ ಏಟು ಮಾಡಿಕೊಂಡಿದ್ದರು. ಇದೇ ಪಂದ್ಯಾವಳಿಯಲ್ಲಿ ಹಿಂದೊಮ್ಮೆ ಫಿಲಿಪ್ ಹ್ಯೂಸ್ ತಲೆಗೆ ಚೆಂಡು ಬಡಿದು ಸಾವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಬಹುದು. ಇದರಿಂದಾಗಿ ದ. ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯಕ್ಕೂ ವೋಗ್ಸ್ ಆಯ್ಕೆಯಾಗಿರಲಿಲ್ಲ.
ಸದ್ಯಕ್ಕೆ ಫಾರ್ಮ್ ಕಳೆದುಕೊಂಡಿರುವ ಕಾರಣಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮುಂದುವರಿಯಲು ಇಚ್ಛಿಸುವುದಿಲ್ಲ ಎಂದು 37 ವರ್ಷದ ವೋಗ್ಸ್ ಹೇಳಿಕೊಂಡಿದ್ದಾರೆ.