ಬಿಗ್ ಶಾಕ್! ವಿರಾಟ್ ಕೊಹ್ಲಿ ಮತ್ತು ಉದ್ಯೋಗ ಬಿಡಲು ಆದೇಶಿಸಿದ ಬಿಸಿಸಿಐ!

ಶುಕ್ರವಾರ, 28 ಜುಲೈ 2017 (09:05 IST)
ಮುಂಬೈ: ವಿರಾಟ್ ಕೊಹ್ಲಿ ಮತ್ತು ಟೀಂ ಇಂಡಿಯಾದ ಇತರ ಕೆಲವು ಆಟಗಾರರಿಗೆ ಬಿಸಿಸಿಐ ಸಾರ್ವಜನಿಕ ಸಂಸ್ಥೆಗಳಲ್ಲಿ ತಾವು ಹೊಂದಿರುವ ವೈಯಕ್ತಿಕ ಹಿತಾಸಕ್ತಿಯ ಉದ್ಯೋಗ ಬಿಡುವಂತೆ ಆದೇಶ ನೀಡಿದೆ.


ಇದರಿಂದ ವಿರಾಟ್ ಕೊಹ್ಲಿ, ಅಜಿಂಕ್ಯಾ ರೆಹಾನೆ, ಚೇತೇಶ್ವರ ಪೂಜಾರ ಸೇರಿದಂತೆ ಕೆಲವು ಕ್ರಿಕೆಟಿಗರು ಬೇರೆ ಸಂಸ್ಥೆಗಳಲ್ಲಿ ಹೊಂದಿರುವ ಹುದ್ದೆಗಳನ್ನು ತೊರೆಯಬೇಕಾಗುತ್ತದೆ. ಕೊಹ್ಲಿ ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಷನ್ ಲಿಮಿಟೆಡ್ ಸಂಸ್ಥೆಯಲ್ಲಿ ಮ್ಯಾನೇಜರ್ ಹುದ್ದೆಯಲ್ಲಿದ್ದಾರೆ. ಅಜಿಂಕ್ಯಾ ರೆಹಾನೆ ಮತ್ತು ಚೇತೇಶ್ವರ ಪೂಜಾರ ಒನ್ ಎನ್ ಜಿಸಿ ಸಂಸ್ಥೆಯಲ್ಲಿ ವಿವಿಧ ಹುದ್ದೆ ಹೊಂದಿದ್ದಾರೆ. ಇದೀಗ ಇವರೆಲ್ಲರೂ ತಮ್ಮ ಉದ್ಯೋಗಕ್ಕೆ ರಾಜೀನಾಮೆ ಕೊಡಬೇಕಾಗುತ್ತದೆ.

ಇವರಿಗೆ ಮಾತ್ರವಲ್ಲ, ಮಾಜಿ ಕ್ರಿಕೆಟಿಗರಾದ ಸುನಿಲ್ ಗವಾಸ್ಕರ್,  ಸೌರವ್ ಗಂಗೂಲಿ ಮುಂತಾದವರಿಗೂ ಈ ನಿಯಮ ಅನ್ವಯವಾಗಲಿದೆ. ಕ್ರಿಕೆಟ್ ಆಡಳಿತ ಮಂಡಳಿಯ ಶಿಫಾರಸ್ಸಿನ ಅನ್ವಯ ಬಿಸಿಸಿಐ ಆಟಗಾರರಿಗೆ ಈ ಸೂಚನೆ ನೀಡಿದೆ. ಇನ್ನು, ಹೊಸತಾಗಿ ಆಟಗಾರರಿಗೆ ಬೇರೆ ಗುತ್ತಿಗೆ ನೀಡುವ ಉದ್ದೇಶವೂ ಬಿಸಿಸಿಐಗಿದೆ ಎನ್ನಲಾಗಿದೆ.

ಇದನ್ನೂ ಓದಿ..  ರವಿತೇಜಾಗೆ ಇಂದು ಪೊಲೀಸ್ ಡ್ರಿಲ್

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ