ಯುವತಿ ಜತೆಗಿನ ಯುಜ್ವೇಂದ್ರ ಚಾಹಲ್ ವಿಡಿಯೋ ವೈರಲ್ ಬೆನ್ನಲ್ಲೇ ರೊಚ್ಚಿಗೆದ್ದ ಮಾಜಿ ಪತ್ನಿ ಧನಶ್ರೀ

Sampriya

ಸೋಮವಾರ, 10 ಮಾರ್ಚ್ 2025 (20:30 IST)
Photo Courtesy X
ಮುಂಬೈ: ಈಚೆಗೆ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಹಾಗೂ ಧನಶ್ರೀ ವರ್ಮಾ ಅವರು ವಿಚ್ಛೇಧನ ಸುದ್ದಿ ಸಭಾರೀ ಸದ್ದು ಮಾಡಿತ್ತು.  ಆದರೆ ಇವರಿಬ್ಬರ ಡಿವೋರ್ಸ್‌ಗೆ ಕಾರಣ ಏನೆಂಬುದು ತಿಳಿದುಬಂದಿರಲಿಲ್ಲ.

ಆದರೆ ದುಬೈನಲ್ಲಿ ನಡೆದ ಭಾರತ vs ನ್ಯೂಜಿಲೆಂಡ್ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಆರ್‌ಜೆ ಮಹ್ವಾಶ್ ಜೊತೆಗೆ  ಯುಜ್ವೇಂದ್ರ ಚಾಹಲ್ ಕಾಣಿಸಿಕೊಂಡಿದ್ದರು. ಇದೀಗ ಇದೇ ಕಾರಣವೇ ದಂಪತಿಗಳ ವಿಚ್ಚೇಧನಕ್ಕೆ ಕಾರಣವಾಯಿತು ಎನ್ನಲಾಗುತ್ತಿದೆ

ಸಾಮಾಜಿಕ ಜಾಲತಾಣದಲ್ಲಿ ಯುಜ್ವೇಂದ್ರ ಹಾಗೂ ಮಹ್ವಾಶ್ ವಿಡಿಯೋ ವೈರಲ್ ಬೆನ್ನಲ್ಲೇ ಪತ್ನಿ ಧನಶ್ರೀ ವರ್ಮಾ ಅವರು ಹಂಚಿಕೊಂಡಿರುವ ಪೋಸ್ಟ್ ಭಾರೀ ಕುತೂಹಲವನ್ನು ಮೂಡಿಸಿದೆ.

ಇನ್‌ಸ್ಟಾಗ್ರಾಂ ಸ್ಟೋರಿನಲ್ಲಿ ಬರೆದುಕೊಂಡ ಧನಶ್ರೀ ಅವರು 'ಮಹಿಳೆಯನ್ನು ದೂಷಿಸುವುದು ಯಾವಾಗಲೂ ಫ್ಯಾಷನ್‌ ಆಗ್ಬೀಟ್ಟಿದೆ' ಎಂದು ಬರೆದುಕೊಂಡಿದ್ದಾರೆ.

ಸ್ಟೇಡಿಯಂನಲ್ಲಿ ಚಾಹಲ್ ಅವರು ಆರ್‌ಜೆ ಮಹ್ವಾಶ್ ಜತೆಗೆ ಪಂದ್ಯಾಟವನ್ನು ಎಂಜಾಯ್ ಮಾಡುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಕ್ರಿಕೆಟಿಗ ಮತ್ತು ರೇಡಿಯೋ ಜಾಕಿಯ ವೈರಲ್ ವಿಡಿಯೋ ತುಣುಕಿಗೆ ಧನಶ್ರೀಯ ಕೌಂಟರ್ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ