ರಾಜಕೀಯಕ್ಕೆ ಕ್ರಿಕೆಟಿಗ ಪ್ರವೀಣ್ ಕುಮಾರ್

ಸೋಮವಾರ, 12 ಸೆಪ್ಟಂಬರ್ 2016 (09:10 IST)
ರಾಷ್ಟ್ರೀಯ ತಂಡದ ಕ್ರಿಕೆಟ್ ಆಟಗಾರ ಪ್ರವೀಣ್ ಕುಮಾರ್ ರಾಜಕೀಯ ರಂಗದಲ್ಲಿ ತಮ್ಮ ಹೊಸ ಇನ್ನಿಂಗ್ಸ್ ಪ್ರಾರಂಭಿಸಿದ್ದಾರೆ. 

ಮುಲಾಯಂ ಸಿಂಗ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿರುವ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವ ಸಾಧ್ಯತೆಗಳಿವೆ.
 
ಉತ್ತರ ಪ್ರದೇಶದ ಮುಖ್ಯಮಂತ್ರಿ, ಸಮಾಜವಾದಿ ನಾಯಕ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ರಾಜಕೀಯಕ್ಕೆ ನಾನಿನ್ನು ಮಗು, ರಾಜಕೀಯ ಕಲಿಯಲು ಯತ್ನಿಸುವೆ. ಪಕ್ಷಕ್ಕೆ ನನ್ನಿಂದಾದ ಸೇವೆ ಸಲ್ಲಿಸ ಬಯಸುವೆ ಎಂದರು.
 
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಿರಾ ಎಂದು ಕೇಳಲಾಗಿ ರಾಜಕೀಯ ನನಗಿನ್ನು ಹೊಸತು. ಕಲಿಯುವುದು ಬಹಳಷ್ಟಿದೆ. ಸದ್ಯಕ್ಕೆ ಚುನಾವಣೆಗೆ ಕಣಕ್ಕಿಳಿಯುವ ವಿಚಾರವಿಲ್ಲ ಎಂದಿದ್ದಾರೆ. 
 
ಪ್ರವೀಣ್ ರಾಷ್ಟ್ರೀಯ ತಂಡದ ಭಾಗವಾಗಿ 6 ಟೆಸ್ಟ್ ಪಂದ್ಯ ಮತ್ತು 68 ಏಕದಿನ ಪಂದ್ಯಗಳನ್ನಾಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ