ಜೈವಿಕ ಸುರಕ್ಷಾ ವಲಯವೆಂಬುದು ಕ್ರಿಕೆಟಿಗರಿಗೆ ಸೆರೆಮನೆ

ಗುರುವಾರ, 12 ನವೆಂಬರ್ 2020 (09:04 IST)
ದುಬೈ: ಕೊರೋನಾ ಭಯದಲ್ಲಿ ಕ್ರಿಕೆಟ್ ಟೂರ್ನಮೆಂಟ್ ಗಳು ನಡೆಯುತ್ತಿದ್ದರೂ ಅದಕ್ಕಾಗಿ ಆಯೋಜಕರು ಕೈಗೊಳ್ಳುತ್ತಿರುವ ಜೈವಿಕ ಸುರಕ್ಷಾ ವಲಯವೆಂಬ ಕೋಟೆ ಸೆರೆಮನೆಯಂತಾಗಿದೆ.


ಅಷ್ಟಕ್ಕೂ ಜೈವಿಕ ಸುರಕ್ಷಾ ವಲಯ ಕ್ರಿಕೆಟಿಗರಿಗೆ ಯಾಕೆ ಕಿರಿ ಕಿರಿ ಉಂಟು ಮಾಡುತ್ತಿದೆ ಗೊತ್ತಾ? ಟೂರ್ನಮೆಂಟ್ ಆರಂಭವಾಗುವಾಗ ಈ ಸುರಕ್ಷಾ ವಲಯಕ್ಕೆ ಸೇರಿಕೊಳ್ಳುವ ಕ್ರಿಕೆಟಿಗರಿಗೆ ಬೇಕಾಬಿಟ್ಟಿ ಹೊರಗೆ ಓಡಾಡುವಂತಿಲ್ಲ. ಕುಟುಂಬದವರೊಡನೆ ಒಳ ಪ್ರವೇಶಿಸಿದರೆ ಹೊರಬರುವಂತಿಲ್ಲ. ಒಂದು ವೇಳೆ ಕುಟುಂಬದವರು ಜತೆಗೇ ಬಾರದಿದ್ದರೆ ಮತ್ತೆ ಅವರನ್ನು ಭೇಟಿಯಾಗಲು ಅವಕಾಶವಿಲ್ಲ. ಅಭ್ಯಾಸ, ಪಂದ್ಯವಿಲ್ಲದೇ ಇದ್ದರೆ ನಾಲ್ಕು ಗೋಡೆ ಮಧ‍್ಯೆ ಕಳೆಯುವ ಕ್ರಿಕೆಟಿಗರಿಗೆ ಇದು ಒಂದು ರೀತಿಯಲ್ಲಿ ಸೆರೆ ವಾಸವೇ. ಇದೇ ಕಾರಣಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇತ್ತೀಚೆಗೆ ಕ್ರಿಕೆಟಿಗರ ಮಾನಸಿಕ ಆರೋಗ್ಯದ ಬಗ್ಗೆ ಗಮನಕೊಡಬೇಕೆಂದು ಐಸಿಸಿಗೆ ಮನವಿ ಮಾಡಿದ್ದರು. ಇಂತಹ ಪರಿಸ್ಥಿತಿಯಲ್ಲಿ ಸುದೀರ್ಘ ಸರಣಿಗಳನ್ನು ಆಡುವುದು ಕ್ರಿಕೆಟಿಗರ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ