ವಿರಾಟ್ ಕೊಹ್ಲಿ ಬದಲಿಸಿ, ರೋಹಿತ್ ಶರ್ಮಾ ಟಿ20 ನಾಯಕತ್ವಕ್ಕೆ ಶುರುವಾಗಿದೆ ಒತ್ತಾಯ

ಗುರುವಾರ, 12 ನವೆಂಬರ್ 2020 (08:52 IST)
ಮುಂಬೈ: ಐಪಿಎಲ್ 13 ರ ಫೈನಲ್ ಗೆಲ್ಲುವ ಮೂಲಕ ಐದನೇ ಬಾರಿಗೆ ರೋಹಿತ್ ಶರ್ಮಾ ನೇತೃತ್ವದಲ್ಲಿ ಮುಂಬೈ ಇಂಡಿಯನ್ಸ್ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಟೀಂ ಇಂಡಿಯಾದಲ್ಲೂ ಟಿ20 ಮಾದರಿ ಕ್ರಿಕೆಟ್ ನಲ್ಲಿ ನಾಯಕತ್ವ ಬದಲಾವಣೆಗೆ ಒತ್ತಾಯ ಜೋರಾಗಿದೆ.


ವಿರಾಟ್ ಕೊಹ್ಲಿ ಬದಲಿಗೆ ರೋಹಿತ್ ಶರ್ಮಾರನ್ನು ಟಿ20 ಮಾದರಿ ಕ್ರಿಕೆಟ್ ಗೆ ನಾಯಕರಾಗಿ ಮಾಡಬೇಕು ಎಂದು ಹಲವು ಮಾಜಿ ಕ್ರಿಕೆಟಿಗರೂ ಒತ್ತಾಯಿಸಲು ಶುರು ಮಾಡಿದ್ದಾರೆ. ಇನ್ನು, ಕೊಹ್ಲಿ ಪಕ್ಕಾ ಎದುರಾಳಿ ಗೌತಮ್ ಗಂಭೀರ್ ಅಂತೂ ರೋಹಿತ್ ರನ್ನು ಟಿ20 ಕ್ರಿಕೆಟ್ ತಂಡಕ್ಕೆ ನಾಯಕರಾಗಿ ಮಾಡದೇ ಇದ್ದರೆ ಅದಕ್ಕಿಂತ ದೊಡ್ಡ ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ ಎಂದಿದ್ದಾರೆ.

ವಿರಾಟ್ ನೇತೃತ್ವದಲ್ಲಿ ಭಾರತ ಇದುವರೆಗೆ ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ರೋಹಿತ್ ಈ ಮಾದರಿಯ ಕ್ರಿಕೆಟ್ ನಲ್ಲಿ ಅತ್ಯಂತ ಯಶಸ್ವೀ ನಾಯಕ. ಹೀಗಾಗಿ ಅವರನ್ನು ಟಿ20 ಗೆ ನಾಯಕರಾಗಿಸಬೇಕು ಎಂದು ಹಲವರು ಒತ್ತಾಯಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ