ರೋಹಿತ್ ಶರ್ಮಾಗೆ ಟೆಸ್ಟ್ ನಾಯಕತ್ವ ಪಟ್ಟ ಸಾಧ್ಯತೆ

ಬುಧವಾರ, 11 ನವೆಂಬರ್ 2020 (11:28 IST)
ಮುಂಬೈ: ಪತ್ನಿಯ ಹೆರಿಗೆಗಾಗಿ ಕ್ರಿಕೆಟ್ ನಿಂದ ರಜೆ ಪಡೆದಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸ್ಥಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ಜನವರಿಯಲ್ಲಿ ನಡೆಯಲಿರುವ ಮೂರು ಟೆಸ್ಟ್ ಪಂದ್ಯಗಳಿಗೆ ರೋಹಿತ್ ಶರ್ಮಾ ನಾಯಕರಾಗುವ ಸಾಧ‍್ಯತೆಯಿದೆ.

 

ರೋಹಿತ್ ಇದುವರೆಗೆ ಟೆಸ್ಟ್ ಕ್ರಿಕೆಟ್ ನಲ್ಲಿ ನಾಯಕತ್ವ ವಹಿಸಿಲ್ಲ. ಆದರೆ ಸೀಮಿತ ಓವರ್ ಗಳಲ್ಲಿ ಅವರ ನಾಯಕತ್ವ ಪರಿಗಣಿಸಿ ಟೆಸ್ಟ್ ತಂಡಕ್ಕೆ ಅವರನ್ನೇ ನಾಯಕರಾಗಿ ಆಯ್ಕೆ ಮಾಡುವ ಸಾಧ್ಯತೆಯಿದೆ. ವಿರಾಟ್ ಕೊಹ್ಲಿಗೆ ರಜೆ ಮಂಜೂರು ಮಾಡಿದ ಬೆನ್ನಲ್ಲೇ ಬಿಸಿಸಿಐ ರೋಹಿತ್ ಶರ್ಮಾರನ್ನು ಟೆಸ್ಟ್ ತಂಡಕ್ಕೆ ಸೇರ್ಪಡೆಗೊಳಿಸಿತ್ತು. ಇದರ ಹಿಂದೆ ನಾಯಕತ್ವದ ಲೆಕ್ಕಾಚಾರವಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ