ವೇಗದ ಶತಕವನ್ನು ಫಿಲಿಪ್ ಹ್ಯೂಸ್ ಗೆ ಅರ್ಪಿಸಿದ ಡೇವಿಡ್ ವಾರ್ನರ್

ಗುರುವಾರ, 5 ಜನವರಿ 2017 (08:45 IST)
ಸಿಡ್ನಿ: ಟೆಸ್ಟ್ ಪಂದ್ಯದಲ್ಲಿ ಮೊದಲ ಅವಧಿಯಲ್ಲೇ ಶತಕ ಬಾರಿಸಿದ ದಾಖಲೆ ಮಾಡಿದ ಡೇವಿಡ್ ವಾರ್ನರ್ ತಮ್ಮ ದಾಖಲೆಯ ಇನಿಂಗ್ಸ್ ನ್ನು ಕ್ರಿಕೆಟ್ ಮೈದಾನದಲ್ಲಿ ಮಡಿದ ಸ್ನೇಹಿತ ಫಿಲಿಪ್ ಹ್ಯೂಸ್ ಗೆ ಅರ್ಪಿಸಿದ್ದಾರೆ.

2014 ರಲ್ಲಿ ದೇಶೀಯ ಪಂದ್ಯ ಆಡುವಾಗ ಬಾಲ್ ತಾಗಿ ಆಸ್ಟ್ರೇಲಿಯಾ ಕ್ರಿಕೆಟಿಗ ಹ್ಯೂಸ್ ಸಾವನ್ನಪ್ಪಿದ್ದರು. ಆ ಸಂದರ್ಭದಲ್ಲಿ ಮೈದಾನದಿಂದ ಹ್ಯೂಸ್ ನ್ನು ಕರೆದೊಯ್ಯುವಾಗ ವಾರ್ನರ್ ಕೈ ಹಿಡಿದಿದ್ದರಂತೆ. ಹೀಗಾಗಿ ಈ ಘಟನೆಯನ್ನು ವಾರ್ನರ್ ಗೆ ಮರೆಯಲು ಸಾಧ್ಯವಾಗುತ್ತಿಲ್ಲ.

“ಪ್ರತೀ ಬಾರಿ ನಾನು ಇಲ್ಲಿ ನಡೆದಾಡುವಾಗ ನನ್ನ ಸ್ನೇಹಿತನೂ ಜತೆಗೇ ನಡೆದ ಹಾಗನಿಸುತ್ತದೆ. ನಾನು ಪ್ರತೀ ಬಾರಿ ಬ್ಯಾಟ್ ಮಾಡಲು ಆತ ಕ್ರೀಸ್ ನ ಇನ್ನೊಂದು ತುದಿಯಲ್ಲಿದ್ದಾನೆಂಬ ನಂಬಿಕೆ ನನ್ನದು. ಹೀಗಾಗಿ ನಾನು ಗಳಿಸಿದ ಪ್ರತೀ ರನ್ ಆತನಿಗಾಗಿ” ಎಂದು ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಾರ್ನರ್ ಭಾವುಕರಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ