ಕಟಕ್: ಧೋನಿ ವಿಕೆಟ್ ಕೀಪರ್. ಅವರಿಗೆ ಬ್ಯಾಟ್ಸ್ ಮನ್ ಹೇಗೆ ಹೆಜ್ಜೆ ಹಾಕುತ್ತಾನೆಂಬುದು ಸ್ಪಷ್ಟವಾಗಿ ಗೊತ್ತಾಗಿಬಿಡುತ್ತದೆ. ಆದರೆ ಅವರು ಬ್ಯಾಟಿಂಗ್ ಮಾಡುವಾಗಲೂ ಅವರು ಅಷ್ಟೇ ಚುರುಕಾಗಿರುತ್ತಾರೆ ಎಂಬುದು ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ರುಜುವಾತಾಯ್ತು.
ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟ್ಸ್ ಮನ್ ನಾಟೌಟ್ ಎಂದು ತೀರ್ಪು ನೀಡಿದ್ದ ಅಂಪಾಯರ್ ತೀರ್ಮಾನವನ್ನು ಒಪ್ಪದೆ ನಾಯಕನಿಗಿಂತ ಮೊದಲು ತಾವೇ ರಿವ್ಯೂಗೆ ನೀಡಿ ಧೋನಿ ಯಶಸ್ವಿಯಾಗಿದ್ದರು. ಅಂತಹದ್ದೇ ಮ್ಯಾಜಿಕ್ ದ್ವಿತೀಯ ಏಕದಿನ ಪಂದ್ಯದಲ್ಲೂ ನಡೆಯಿತು.
40.5 ನೇ ಓವರ್ ನಲ್ಲಿ ಯುವರಾಜ್ ಸಿಂಗ್ 146 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದಾಗ ವಿಕೆಟ್ ಹಿಂದೆ ಕ್ಯಾಚ್ ಗೆ ಇಂಗ್ಲೆಂಡ್ ಆಟಗಾರರು ಮನವಿ ಸಲ್ಲಿಸಿದರು. ಇದನ್ನು ಫೀಲ್ಡ್ ಅಂಪಾಯರ್ ಪುರಸ್ಕರಿಸಿದ್ದರು ಕೂಡಾ. ಆದರೆ ಕೂಡಲೇ ಧೋನಿ ಯುವಿಗೆ ರಿವ್ಯೂ ಕೇಳುವಂತೆ ಮನವಿ ಮಾಡಿದರು.
ಧೋನಿ ಲೆಕ್ಕಾಚಾರ ತಪ್ಪಲಿಲ್ಲ. ನಿಜವಾಗಿ ಚೆಂಡು ಬ್ಯಾಟ್ ಗೆ ತಗಲಿ ಕೀಪರ್ ಕೈ ಸೇರುವ ಮುನ್ನ ನೆಲಕ್ಕೆ ತಾಕಿತ್ತು. ಹೀಗಾಗಿ ರಿವ್ಯೂ ಪಡೆದು ಯುವಿ ನಾಟೌಟ್ ಎಂದು ತೀರ್ಪು ಬಂತು. ಯುವರಾಜ್ ಬಚಾವ್ ಆದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ