ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿರಾಟ್, ರೋಹಿತ್ ಅನುಪಸ್ಥಿತಿ ನಿಭಾಯಿಸುವುದು ದೊಡ್ಡ ಸವಾಲು ಎಂದ ಗಂಭೀರ್‌

Sampriya

ಶುಕ್ರವಾರ, 23 ಮೇ 2025 (18:26 IST)
Photo Credit X
ನವದೆಹಲಿ: ಟೆಸ್ಟ್‌ ಕ್ರಿಕೆಟ್‌ನಲ್ಲಿ ಸ್ಟಾರ್‌ ಬ್ಯಾಟರ್‌ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಅನುಪಸ್ಥಿತಿ ನಿಭಾಯಿಸುವುದು ದೊಡ್ಡ ಸವಾಲು ಆಗಿರಲಿದೆ ಎಂದು ಭಾರತ ಕ್ರಿಕೆಟ್‌ ತಂಡದ ಕೋಚ್‌ ಗೌತಮ್ ಗಂಭೀರ್ ಹೇಳಿದ್ದಾರೆ.

ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಸಲ್ಲಿಸಿರುವ ವಿರಾಟ್ ಹಾಗೂ ರೋಹಿತ್  ಅವರ ಕುರಿತು  ಗಂಭೀರ್ ಕೊನೆಗೂ ಮೌನ ಮುರಿದಿದ್ದಾರೆ. ರೋಹಿತ್ ಹಾಗೂ ವಿರಾಟ್ ಸ್ಥಾನವನ್ನು ತುಂಬುವುದು ಅಷ್ಟು ಸುಲಭವಲ್ಲ ಎಂಬುದನ್ನು ಗಂಭೀರ್ ಒಪ್ಪಿಕೊಂಡಿದ್ದಾರೆ.

ಇಬ್ಬರು ಅನುಭವಿ ಆಟಗಾರರ ಅನುಪಸ್ಥಿತಿ ನಮಗೆ ಕಾಡಲಿದೆ. ಅದೇ ಹೊತ್ತಿಗೆ ಇತರೆ ಆಟಗಾರರಿಗೆ ಜವಾಬ್ದಾರಿ ವಹಿಸಿಕೊಂಡು ಆಡಲು ಉತ್ತಮ ಅವಕಾಶವೂ ಇರಲಿದೆ' ಎಂದು ತಿಳಿಸಿದ್ದಾರೆ.

ಪ್ರಸಕ್ತ ಸಾಗುತ್ತಿರುವ ಐಪಿಎಲ್ ಟೂರ್ನಿಯ ಮಧ್ಯೆ ರೋಹಿತ್ ಹಾಗೂ ಕೊಹ್ಲಿ ಒಬ್ಬರ ಹಿಂದೆ ಒಬ್ಬರಂತೆ ದೀರ್ಘಾವಧಿಯ ಕ್ರಿಕೆಟ್‌ಗೆ ವಿದಾಯ ಸಲ್ಲಿಸಿದ್ದರು. ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಸರಣಿಗೂ ಮುನ್ನ ಈ ನಿರ್ಧಾರ ಪ್ರಕಟಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ