ತನ್ನೆದುರೇ ಹೆಲಿಕಾಪ್ಟರ್ ಶಾಟ್ ಹೊಡೆದ ಹಾರ್ದಿಕ್ ಪಾಂಡ್ಯಗೆ ಧೋನಿ ಪ್ರತಿಕ್ರಿಯೆ ಏನು ಗೊತ್ತಾ?!

ಶುಕ್ರವಾರ, 5 ಏಪ್ರಿಲ್ 2019 (09:21 IST)
ಮುಂಬೈ: ಹೆಲಿಕಾಪ್ಟರ್ ಶಾಟ್ ಎಂದರೆ ಅದು ಧೋನಿ ಟ್ರೇಡ್ ಮಾರ್ಕ್ ಶಾಟ್. ಈ ಶಾಟ್ ಪರಿಚಯವಾಗಿದ್ದೇ ಧೋನಿಯಿಂದ. ಆದರೆ ಇದೀಗ ಎಲ್ಲಾ ಕ್ರಿಕೆಟಿಗರಿಗೂ ಇದು ಫೇವರಿಟ್ ಆಗಿಬಿಟ್ಟಿದೆ.


ಮೊನ್ನೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆದ ಐಪಿಎಲ್ ಪಂದ್ಯದಲ್ಲಿ ಧೋನಿ ಎದುರೇ ಹಾರ್ದಿಕ್ ಪಾಂಡ್ಯ ಈ ಶಾಟ್ ಹೊಡೆದು ಗುರುವಿಗೇ ಚಾಲೆಂಜ್ ಕೊಟ್ಟಿದ್ದಾರೆ.

ಹಾರ್ದಿಕ್ ಪಾಂಡ್ಯ ಹೆಲಿಕಾಪ್ಟರ್ ಶಾಟ್ ಹೊಡೆದಾಗ ಧೋನಿ ಒಂದು ನಗು ನಕ್ಕು ಸುಮ್ಮನಾಗಿದ್ದರು. ಆದರೆ ಈ ಬಗ್ಗೆ ಪಂದ್ಯದ ನಂತರ ಮಾತನಾಡಿದ ಹಾರ್ದಿಕ್ ಪಾಂಡ್ಯ ‘ನನಗೆ ಪಂದ್ಯಕ್ಕೂ ಮೊದಲು ಕನಸಿತ್ತು. ನಾನು ಹೆಲಿಕಾಪ್ಟರ್ ಶಾಟ್ ಹೊಡೆಯೋದು, ಅದನ್ನು ನೋಡಿ ಧೋನಿ ನನ್ನ ಬಳಿ ಬಂದು ಪ್ರಶಂಸಿಸುತ್ತಾರೆ ಎಂದು. ಆದರೆ ಅವರು ಹಾಗೆ ಮಾಡಲಿಲ್ಲ. ಪರವಾಗಿಲ್ಲ’ ಎಂದು ಹಾರ್ದಿಕ್ ನಗುತ್ತಲೇ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ