ನನ್ನನ್ನು ಹಲವು ಬಾರಿ ಧೋನಿ ಕಾಪಾಡಿದ್ದರು ಎಂದ ವಿರಾಟ್ ಕೊಹ್ಲಿ
ನವದೆಹಲಿ: ವಿರಾಟ್ ಕೊಹ್ಲಿ ಅಲೆಯಲ್ಲಿ ಧೋನಿ ಕೊಚ್ಚಿ ಹೋದರು ಎಂದು ಹಲವರು ಹೇಳಬಹುದು. ಆದರೆ ಕೊಹ್ಲಿಗೆ ಮಾತ್ರ ಧೋನಿಯೇ ನಾಯಕನಂತೆ. ಆತ ಹಲವು ಬಾರಿ ನಾನು ತಂಡದಿಂದ ಕೊಕ್ ಆಗದಂತೆ ಕಾಪಾಡಿದರು ಎಂದು ಟೀಂ ಇಂಡಿಯಾ ನಾಯಕ ಹೇಳಿಕೊಂಡಿದ್ದಾರೆ.
ಧೋನಿಯಿಂದ ತೆರವಾದ ಸ್ಥಾನಕ್ಕೆ ಕೊಹ್ಲಿಯನ್ನು ನೇಮಿಸಲಾಗಿದೆ. ಆದರೂ ಧೋನಿ ಎಂದರೆ ನನ್ನ ಮನಸ್ಸಿಗೆ ಬರುವ ಮೊದಲ ಶಬ್ಧ ಕ್ಯಾಪ್ಟನ್ ಆಗಿದೆ ಎಂದು ಕೊಹ್ಲಿ ಧೋನಿ ಗುಣಗಾನ ಮಾಡಿದ್ದಾರೆ.