ಧೋನಿ ಸಿಎಸ್ ಕೆ ತಂಡವನ್ನು ಐಪಿಎಲ್ ಗೆ ಸ್ವಾಗತಿಸಿದ ಸ್ಟೈಲೇ ಬೇರೆ!

ಭಾನುವಾರ, 16 ಜುಲೈ 2017 (07:01 IST)
ಚೆನ್ನೈ: ಮುಂದಿನ ಐಪಿಎಲ್ ಆವೃತ್ತಿಗೆ ಕಣಕ್ಕೆ ಮರಳುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈಗಲೇ ಭಾರೀ ತಯಾರಿ ನಡೆಸುತ್ತಿದೆ. ಅಭಿಮಾನಿಗಳು ಚೆನ್ನೈ ತಂಡದ ಜೆರ್ಸಿ ತೊಟ್ಟು ಸಾಮಾಜಿಕ ಜಾಲತಾಣದಲ್ಲಿ ತಂಡಕ್ಕೆ ಸ್ವಾಗತ ಕೋರುತ್ತಿದ್ದಾರೆ.


ಆದರೆ ಸಿಎಸ್ ಕೆ ತಂಡದ ಯಶಸ್ವಿ ನಾಯಕನಾಗಿದ್ದಾಗ ಧೋನಿ ತಮ್ಮ ಹಳೆಯ ತಂಡವನ್ನು ಸ್ವಾಗತಿಸಿದ ಪರಿಯೇ ಬೇರೆ. ಹಳದಿ ಬಣ್ಣದ ಜೆರ್ಸಿ ತೊಟ್ಟುಕೊಂಡು ನಂ.7 ಸಂಖ್ಯೆ ಹಾಗೂ ಕೆಳಗೆ ‘ತಲಾ’ ಎಂದು ತಮಿಳು ಶಬ್ಧವನ್ನು ಬರೆದುಕೊಂಡು ತಮ್ಮ ನೆಚ್ಚಿನ ನಾಯಿ ಜತೆಗೆ ಫೋಟೋ ತೆಗೆದು ಇನ್ ಸ್ಟಾಗ್ರಾಂ ಪುಟದಲ್ಲಿ ಪ್ರಕಟಿಸಿದ್ದಾರೆ.

ಇದನ್ನು ಸಿಎಸ್ ಕೆ ತಂಡ ಮರು ಪ್ರಕಟಿಸಿದೆ. ಈ ಮೂಲಕ ಮತ್ತೆ ತಾವು ಚೆನ್ನೈ ತಂಡಕ್ಕೆ ಮರಳಲು ಉತ್ಸುಕರಾಗಿರುವುದನ್ನು ಧೋನಿ ಸೂಚಿಸಿದ್ದಾರೆ. ಅಲ್ಲಿಗೆ ಧೋನಿ ಮತ್ತೆ ಹಳದಿ ಜೆರ್ಸಿ ತೊಟ್ಟು ಆಡುವುದು ಪಕ್ಕಾ ಆಗಿದೆ.

ಇದನ್ನೂ ಓದಿ.. ಸೆಕ್ಸ್ ಲೈಫ್ ಎಂಜಾಯ್ ಮಾಡುವುದರಲ್ಲಿ ಮಹಿಳೆಯರು ಪುರುಷರಿಗಿಂತಲೂ ಮುಂದು!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ