ಕ್ರಿಸ್ ಗೇಲ್ ಅವರಿಗೂ ಭಾರತ ಇನ್ನೊಂದು ತವರಂತೆ

ಶನಿವಾರ, 10 ಸೆಪ್ಟಂಬರ್ 2016 (17:03 IST)
ವಿದೇಶಿ ಕ್ರಿಕೆಟಿಗರಾದ ಕ್ರಿಸ್ ಗೇಲ್, ಎಬಿಡಿ, ಗ್ಲೇನ್ ಮೆಗ್ರಾಥ್ ಅಂತವರನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ತಮ್ಮ ದೇಶದವರೇ ಎಂಬಂತೆ ಪ್ರೀತಿಸುತ್ತಾರೆ. ಆರಾಧಿಸುತ್ತಾರೆ. ಭಾರತೀಯರ ಈ ಪ್ರೀತಿಗೆ ಮೂಕ ವಿಸ್ಮಿತರಾಗಿರುವ ಮಹಾನ್ ದಿಗ್ಗಜರು ಕೂಡ ಭಾರತವನ್ನು ತಮ್ಮದೇ ತವರೆಂಬಂತೆ ಪ್ರೀತಿಸುತ್ತಾರೆ. ಭಾರತ ತನ್ನ ಇನ್ನೊಂದು ತವರು ಮನೆ ಎಂದು ಆಸೀಸ್ ತಂಡದ ಮಾಜಿ ವೇಗದ ಬೌಲರ್ ಗ್ಲೇನ್ ಮೆಗ್ರಾಥ್ ಶುಕ್ರವಾರ ಹೇಳಿಕೆ ನೀಡಿದ್ದರು. ನವದೆಹಲಿಯಲ್ಲಿ ಖಾಸಗಿ ನಡೆದ ಸಮಾರಂಭದವೊಂದರಲ್ಲಿ ಭಾಗವಹಿಸಿದ್ದ ಕ್ರಿಸ್ ಗೇಲ್ ಕೂಡ ಇದೇ ಮಾತುಗಳನ್ನಾಡಿದ್ದಾರೆ. 

ತಮ್ಮ ಆತ್ಮಕಥೆ 'ಸಿಕ್ಸ್ ಮಶೀನ್' ಬಗ್ಗೆ ಮಾತನಾಡಲು  ಜಮೈಕಾ ಮೂಲದ ಕ್ರಿಕೆಟಿಗ ನವದೆಹಲಿಗೆ ಆಗಮಿಸಿದ್ದರು. ಅವರ ಪುಸ್ತಕದ ಬಗ್ಗೆ ನೀವೇನು ನಿರೀಕ್ಷೆ ಹೊಂದಿದ್ದೀರಿ? ಅವರ ಬಾಲ್ಯ ಹೇಗಿತ್ತು? ಅಲ್ಲಿಂದ ಅವರು ವಿನಾಶಕಾರಿ ಬ್ಯಾಟ್ಸ್‌ಮನ್ ಆಗಿ ಬೆಳೆದದ್ದು ಹೇಗೆ? ಎಂಬುದನ್ನೇ? ಆದರೆ ಅವರು ಮೊದಲ ಬಾರಿಗೆ ಅಂದರೆ 1999ರಲ್ಲಿ ಭಾರತಕ್ಕೆ ಬಂದಾಗ ತುಂಬಾ ನರ್ವಸ್ ಆಗಿದ್ದರಂತೆ. ಅದನ್ನು ಅವರದೇ ಮಾತುಗಳಲ್ಲಿ ಕೇಳಿ: 'ವೆಸ್ಟ್ ಇಂಡೀಸ್ ತಂಡದ ಭಾಗವಾಗಿ ನಾನು ಭಾರತಕ್ಕೆ ಹೋಗಬೇಕು ಎಂದು ಕರೆ ಬಂದಾಗ ನಾನು ತುಂಬ ಆತಂಕಕ್ಕೀಡಾಗಿದ್ದೆ. ಭಾರತ ಅತಿ ದೂರದ ದೇಶ ಮತ್ತು ಅಲ್ಲಿಗೆ ನಾನು ಅದೇ ಮೊದಲ ಬಾರಿಗೆ ಕಾಲಿಡುತ್ತಿದೆ. ನಾನು ಭಾರತದಲ್ಲಿ ಪ್ರಥಮ ಪಂದ್ಯವನ್ನಾಡಿದ್ದು ಪುಣಾದಲ್ಲಿ. ಆ ಬಳಿಕ ಆ ದೇಶ ನನ್ನ ಇನ್ನೊಂದು ತವರು ಮನೆಯಾಯಿತು', ಎನ್ನುತ್ತಾರೆ ಗೇಲ್.
 
ಕ್ರಿಕೆಟ್‌ನ ಯೂನಿವರ್ಸಲ್ ಬಾಸ್ ಎಂದೇ ಕರೆಸಿಕೊಳ್ಳುವ ಕ್ರಿಸ್ ಗೇಲ್ ಸದಾ ಮೋಜು ಮಸ್ತಿಗಳಲ್ಲಿ ವ್ಯಸ್ತರಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ ಬಿಡಿ. ಹೆಚ್‌ಟಿ ಸಿಟಿಯಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಪಾಲ್ಗೊಂಡ ಕೂಡ ಅವರು ಪಂಜಾಬಿ ಸಾಂಗ್‌ಗೆ ಕುಣಿದರು. ಹಾಸ್ಯ ಚಟಾಕಿ ಹಾರಿಸಿದರು. ಈ ಸಂದರ್ಭದಲ್ಲಿ ಮಾತನಾಡುತ್ತಿದ್ದ ಅವರು, 'ನಮ್ಮ ಭಾರತೀಯ ಕ್ರಿಕೆಟಿಗರನ್ನು ಕಡಿಮೆ ಎಂದು ತಿಳಿಯಬೇಡಿ. ಅವರು ಸ್ವಲ್ಪ ನಾಚಿಕೆ ಸ್ವಭಾವದವರಿರಬಹುದು. ಆದರೆ ಅವರು ಪಾರ್ಟಿಯಲ್ಲಿ ಪಾಲ್ಗೊಳ್ಳುವುದಿಲ್ಲವೆಂದುಕೊಳ್ಳಬೇಡಿ. ಅವರು ಪಾರ್ಟಿಯನ್ನು ಇಷ್ಟ ಪಡುತ್ತಾರೆ. ಮನದೀಪ್ ಸಿಂಗ್ ನನಗೆ ಹಲವು ಪಂಜಾಬಿ ವೈಶಿಷ್ಟ್ಯತೆಗಳನ್ನು ಕಲಿಸಿಕೊಟ್ಟಿದ್ದಾರೆ. ಸರ್ಫರಾಜ್ ಖಾನ್ ಬಹಳ ತಿಳಿದುಕೊಂಡಿದ್ದಾರೆ. ಅವರಿನ್ನೂ ನವಯುವಕ. ತಿಳಿಯಬೇಕಿರುವುದು ಬಹಳಷ್ಟಿದೆ', ಎಂದು ಭಾರತೀಯ ಕ್ರಿಕೆಟಿಗರ ಬಗ್ಗೆ ಬಗ್ಗೆ ತಮ್ಮ ಅಭಿಪ್ರಾಯವನ್ನವರು ಹೇಳಿಕೊಂಡರು.
 
ಭಾರತೀಯ ಯುವತಿಯರ ಜತೆ ಪಾರ್ಟಿ ಮಾಡುವುದು ತಮಗೆ ಬಹಳ ಖುಷಿ ಕೊಡುತ್ತದೆ ಎಂದು ಸಹ ಅವರು ಬಹಿರಂಗ ಪಡಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ