ಕೊಹ್ಲಿ, ಡಿ ವಿಲಿಯರ್ಸ್ ಪಾಠದಿಂದ ಬ್ಯಾಟಿಂಗ್ ಸುಧಾರಣೆ: ಕೆ.ಎಲ್. ರಾಹುಲ್

ಬುಧವಾರ, 8 ಜೂನ್ 2016 (18:50 IST)
ಜಿಂಬಾಬ್ವೆ ಪ್ರವಾಸದಲ್ಲಿ ಸೀಮಿತ ಓವರುಗಳ ಪಂದ್ಯಗಳಿಗೆ ಚೊಚ್ಚಲ ಪ್ರವೇಶ ನಿರೀಕ್ಷಿಸಿರುವ ಕೆ.ಎಲ್. ರಾಹುಲ್ ತಾವು ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಅವರಿಂದ ತುಂಬಾ ಕಲಿತಿದ್ದೇನೆ ಎಂದು ಹೇಳಿದರು. ಐಪಿಎಲ್ ಸಂದರ್ಭದಲ್ಲಿ ತಾವು ಕಲಿತ ಕ್ರಿಕೆಟ್ ಪಾಠವು ತಮ್ಮನ್ನು ಶ್ರೇಷ್ಟ ಕ್ರಿಕೆಟರನ್ನಾಗಿ ಮಾಡಿದ್ದು, ಜಿಂಬಾಬ್ವೆ ಪ್ರವಾಸದಲ್ಲಿ ತಾವು ಅದನ್ನು ಪ್ರದರ್ಶಿಸುವುದಾಗಿ ತಿಳಿಸಿದರು.

ನಾನು  ವಿರಾಟ್ ಕೊಹ್ಲಿ ಮತ್ತು ಎಬಿ ಜತೆ ಸಮಯ ಕಳೆದಿದ್ದು, ನನ್ನ ಕ್ರಿಕೆಟ್ ಸುಧಾರಣೆಗೆ ಮತ್ತು ಕಿರು ಮಾದರಿ ಕ್ರಿಕೆಟ್‌ನಲ್ಲಿ ಯಶಸ್ವಿಯಾಗಲು ಏನು ಮಾಡಬೇಕೆಂದು ಕೇಳಿದ್ದೆ. ಅವರು ನೀಡಿದ್ದ ಉಪಾಯಗಳು ಮತ್ತು ಸಲಹೆಗಳು ನನ್ನ ಬ್ಯಾಟಿಂಗ್ ಸುಧಾರಣೆಗೆ ನೆರವಾಯಿತು ಎಂದು ರಾಹುಲ್ ನುಡಿದರು. 
 
ಐಪಿಎಲ್ 9 ಸೀಸನ್ 24 ವರ್ಷದ ರಾಹುಲ್‌ ಅವರನ್ನು ಬೆಳಕಿಗೆ ತಂದಿದ್ದು, ಆರ್‌ಸಿಬಿ ಪರ ನಿರ್ಣಾಯಕ ಆಟಗಳನ್ನು ಆಡಿದ್ದಾರೆ.  ಜಿಂಬಾಬ್ವೆಯಲ್ಲಿ ಬೌಲರ್‌ಗಳಿಗೆ ಹಿತಕರವಾಗಿಸಲು ಬ್ಯಾಟ್ಸ್‌ಮನ್ ಮೇಲೆ ಹೊಣೆಗಾರಿಕೆ ಇರುತ್ತದೆಂದು ರಾಹುಲ್ ನಂಬಿದ್ದಾರೆ. ಏಕದಿನ ಪಂದ್ಯ ಮತ್ತು ಟಿ 20 ಮಾದರಿಗಳಲ್ಲಿ ಭಾರತದ ಬ್ಯಾಟ್ಸ್‌ಮನ್ ಮೇಲೆ ದೊಡ್ಡ ಮೊತ್ತವನ್ನು ಕಲೆಹಾಕುವ ಮತ್ತು ಬೌಲರುಗಳಿಗೆ ಅನುಕೂಲ ಕಲ್ಪಿಸುವ ಹೆಚ್ಚಿನ ಹೊಣೆಗಾರಿಕೆ ಇರುತ್ತದೆ ಎಂದು ರಾಹುಲ್ ಹೇಳಿದರು. 
 
ಭಾರತ ಜೂನ್ 11-22ರವರೆಗೆ ಮೂರು ಏಕದಿನ ಪಂದ್ಯಗಳು ಮತ್ತು ಮೂರು ಟಿ 20ಗಳನ್ನು ಜಿಂಬಾಬ್ವೆ ವಿರುದ್ಧ ಆಡಲಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ