ಕೊನೆಗೂ ಕ್ರಿಕೆಟರ್ ರಿಂಕು ಸಿಂಗ್, ಸಂಸದೆ ಪ್ರಿಯಾ ಸರೋಜ್ ಮದುವೆ ಬಗ್ಗೆ ಸಿಕ್ತು ಬಿಗ್‌ ಅಪ್‌ಡೇಟ್‌

Sampriya

ಸೋಮವಾರ, 20 ಜನವರಿ 2025 (16:48 IST)
ನವದೆಹಲಿ: ಭಾರತದ ಸ್ಟಾರ್ ಬ್ಯಾಟರ್ ರಿಂಕು ಸಿಂಗ್ ಅವರು ಸಮಾಜವಾದಿ ಪಕ್ಷದ (ಎಸ್‌ಪಿ) ಸಂಸದೆ ಪ್ರಿಯಾ ಸರೋಜ್ ಅವರನ್ನು ಮದುವೆಯಾಗಲಿದ್ದಾರೆಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಈಚೆಗೆ ಭಾರೀ ವೈರಲ್ ಆಗಿತ್ತು. ಇದೀಗ ಈ ಸಂಬಂಧ ಪ್ರಿಯಾ ಸರೋಜ್ ಅವರ ತಂದೆ ಶಾಸಕ ತುಫಾನಿ ಸರೋಜ್ ಅವರು ಪ್ರತಿಕ್ರಿಯಿಸಿದ್ದಾರೆ.

ಮದುವೆ ಬಗ್ಗೆ ಜನವರಿ 16 ರಂದು ಅಲಿಘರ್‌ನಲ್ಲಿ ರಿಂಕು ಸಿಂಗ್ ಅವರ ತಂದೆಯೊಂದಿಗೆ ನಮ್ಮ ಕುಟುಂಬ "ಅರ್ಥಪೂರ್ಣ ಮಾತುಕತೆ" ನಡೆಸಿದೆ.  ಎರಡೂ ಕಡೆಯವರು ವೈವಾಹಿಕ ಮೈತ್ರಿಗೆ ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.

ಇದುವರೆಗೆ ಯಾವುದೇ ಉಂಗುರ ಸಮಾರಂಭ ಅಥವಾ ಮದುವೆಯ ಪೂರ್ವ ಕಾರ್ಯಕ್ರಮ ನಡೆದಿಲ್ಲ ಎಂದು ತುಫಾನಿ ಸರೋಜ್ ಪಿಟಿಐಗೆ ತಿಳಿಸಿದ್ದಾರೆ.

ತನ್ನ ಮಗಳು ಪ್ರಿಯಾ ತನ್ನ ಸ್ನೇಹಿತರೊಬ್ಬರ ಮೂಲಕ ರಿಂಕು ಸಿಂಗ್ ಅವರನ್ನು ಭೇಟಿಯಾಗಿದ್ದಾಳೆ, ಅವರ ತಂದೆ ಕೂಡ ಕ್ರಿಕೆಟರ್ ಆಗಿದ್ದಾರೆ. "ರಿಂಕು ಮತ್ತು ಪ್ರಿಯಾ ಒಂದು ವರ್ಷದಿಂದ ಒಬ್ಬರಿಗೊಬ್ಬರು ತಿಳಿದಿದ್ದಾರೆ. ಇಬ್ಬರೂ ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದಾರೆ ಆದರೆ ಸಂಬಂಧಕ್ಕೆ ಅವರ ಕುಟುಂಬಗಳ ಒಪ್ಪಿಗೆ ಬೇಕಿತ್ತು. ಎರಡೂ ಕುಟುಂಬಗಳು ಈ ಮದುವೆಗೆ ಒಪ್ಪಿಗೆ ನೀಡಿದ್ದಾರೆ ಎಂದು ಅವರು ಹೇಳಿದರು.

ಲಕ್ನೋದಲ್ಲಿ ನಿಶ್ಚಿತಾರ್ಥವನ್ನು ಯೋಜಿಸಲಾಗಿದ್ದು, ಸಂಸತ್ ಅಧಿವೇಶನದ ನಂತರ ನಿಶ್ಚಿತಾರ್ಥ ಮತ್ತು ವಿವಾಹದ ದಿನಾಂಕಗಳನ್ನು ಅಂತಿಮಗೊಳಿಸಲಾಗುವುದು ಎಂದು ಸರೋಜ್ ತಂದೆ ಖಚಿತಪಡಿಸಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ