ದ. ಆಫ್ರಿಕಾ ಕ್ರಿಕೆಟಿಗನ ಯಾವ ತಪ್ಪಿಗೆ ಈ ದೊಡ್ಡ ಶಿಕ್ಷೆ?

ಗುರುವಾರ, 22 ಡಿಸೆಂಬರ್ 2016 (10:57 IST)
ಜೊಹಾನ್ಸ್ ಬರ್ಗ್: ದ.ಆಫ್ರಿಕಾ ಕ್ರಿಕೆಟಿಗ ಅಲ್ವಿರೋ ಪೀಟರ್ಸನ್ ಎರಡು ವರ್ಷಗಳಿ ನಿಷೇಧಕ್ಕೊಳಗಾಗಿದ್ದಾರೆ. ಅಂದ ಹಾಗೆ ಅವರ ಯಾವ ತಪ್ಪಿಗೆ ಈ ದೊಡ್ಡ ಶಿಕ್ಷೆ ಗೊತ್ತಾ?


ಹ್ಯಾನ್ಸಿ ಕ್ರೊನಿಯೇ ನಂತರ ದ. ಆಫ್ರಿಕಾ ಕ್ರಿಕೆಟಿಗನೊಬ್ಬನಿಗೆ ಅಲ್ಲಿನ ಕ್ರಿಕೆಟ್ ಮಂಡಳಿ ಇಷ್ಟು ದೊಡ್ಡ ಶಿಕ್ಷೆ ನೀಡಿದ್ದೇ ಇಲ್ಲ. ಇದೀಗ ಅಂತಹದ್ದೇ ಪ್ರಕರಣವೊಂದಕ್ಕೆ ಪೀಟರ್ಸನ್ ಶಿಕ್ಷೆಗೊಳಗಾಗಿದ್ದಾರೆ. ದೇಶೀಯ ಕ್ರಿಕೆಟ್ ನಲ್ಲಿ ಭ್ರಷ್ಟಾಚಾರ ಮಾಡಿ ಸಿಕ್ಕಿಹಾಕಿಕೊಂಡ ಕಾರಣಕ್ಕೆ ಪೀಟರ್ಸನ್ ಗೆ ಶಿಕ್ಷೆಯಾಗಿದೆ.

ಭ್ರಷ್ಟಾಚಾರ ಮಾಡಿದ್ದಲ್ಲದೆ, ತನಿಖೆಗೆ ಅಗತ್ಯವಾದ ಸಾಕ್ಷ್ಯವನ್ನೂ ನಾಶ ಮಾಡಿದ ಆರೋಪ ಅವರ ಮೇಲಿದೆ. ಈ ವರ್ಷದ ನವಂಬರ್ ನಿಂದ ಅನ್ವಯವಾಗುವಂತೆ ಇನ್ನು ಎರಡು ವರ್ಷ ಅವರು ಕ್ರಿಕೆಟ್ ಆಡುವಂತಿಲ್ಲ ಎಂದು ದ. ಆಫ್ರಿಕಾ ಕ್ರಿಕೆಟ್ ಮಂಡಳಿ ತಿಳಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ