ಕ್ರಿಕೆಟಿಗ ಗೌತಮ್ ಗಂಭೀರ್ ಮಾಡಲುದ್ದೇಶಿಸಿದ ಈ ಕೆಲಸಕ್ಕೆ ನಿಮ್ಮದು ಇರಲೊಂದು ಚಪ್ಪಾಳೆ!

ಶುಕ್ರವಾರ, 28 ಏಪ್ರಿಲ್ 2017 (10:48 IST)
ನವದೆಹಲಿ: ಕ್ರಿಕೆಟಿಗ ಗೌತಮ್ ಗಂಭೀರ್ ಒಂದೊಳ್ಳೆಯ ಕೆಲಸಕ್ಕೆ ಮುಂದಾಗಿದ್ದಾರೆ. ಆಗಾಗ ಭಾರತೀಯ ಯೋಧರ ಪರವಾಗಿ ಮಾತನಾಡುವ ಗಂಭೀರ್ ಈ ಬಾರಿ ಕೆಲಸದ ಮೂಲಕ ಮಾಡಿ ತೋರಿಸಲು ಮುಂದಾಗಿದ್ದಾರೆ.

 
ಮೊನ್ನೆಯಷ್ಟೇ ಸುಕ್ಮಾದಲ್ಲಿ ನಕ್ಸಲರ ದಾಳಿಯಿಂದಾಗಿ ಮೃತಪಟ್ಟ 25 ವೀರ ಯೋಧರ ಮಕ್ಕಳ ವಿದ್ಯಾಭ್ಯಾಸದ ಖರ್ಚು ಹೊರಲು ಗಂಭೀರ್ ನಿರ್ಧರಿಸಿದ್ದಾರೆ. ಪತ್ರಿಕೆಯೊಂದಕ್ಕೆ ನೀಡಿದ ಹೇಳಿಕೆಯಲ್ಲಿ ಗಂಭೀರ್ ಈ ವಿಷಯ ಪ್ರಸ್ತಾಪಿಸಿದ್ದಾರೆ.

‘ಆ ದಿನ ನಾನು ಪತ್ರಿಕೆ ಓದಲು ಕುಳಿತಾಗ ಹುತಾತ್ಮ ಯೋಧರ ಇಬ್ಬರು ಹೆಣ್ಣು ಮಕ್ಕಳ ದಯನೀಯ ಮುಖ ನೋಡಿದೆ. ಒಬ್ಬಾಕೆ ತನ್ನ ಪ್ರೀತಿಯ ಅಪ್ಪನಿಗೆ ಸೆಲ್ಯೂಟ್ ಮಾಡುತ್ತಿದ್ದಳು. ಇನ್ನೊಬ್ಬಳನ್ನು ಬಂಧುಗಳು ಸಮಾಧಾನಿಸುತ್ತಿದ್ದರು.

‘ಈ ಎಲ್ಲಾ ಹುತಾತ್ಮ ಯೋಧರ ಮಕ್ಕಳ ವಿದ್ಯಾಭ್ಯಾಸದ ವೆಚ್ಚ ಇನ್ನು ಮುಂದೆ ಗಂಭೀರ್ ಪ್ರತಿಷ್ಠಾನದ ಜವಾಬ್ದಾರಿ. ಇದಕ್ಕಾಗಿ ನನ್ನ ತಂಡ ಈಗಾಗಲೇ ಕಾರ್ಯಪ್ರವೃತ್ತವಾಗಿದೆ’ ಎಂದು ಗಂಭೀರ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ