ಪಾಕ್ ಕ್ರಿಕೆಟಿಗ ಅಫ್ರಿದಿ ಚ್ಯಾರಿಟಿಗೆ ಬೆಂಬಲಿಸಿದ್ದನ್ನು ಸಮರ್ಥಿಸಿದ ಹರ್ಭಜನ್ ಸಿಂಗ್

ಶುಕ್ರವಾರ, 3 ಏಪ್ರಿಲ್ 2020 (09:21 IST)
ಮುಂಬೈ: ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರ ಚ್ಯಾರಿಟಿಯೊಂದಕ್ಕೆ ಕೊರೋನಾ ವಿರುದ್ಧ ಹೋರಾಡಲು ಸಹಾಯ ಮಾಡಿ ಎಂದು ಕೇಳಿಕೊಂಡಿದ್ದ ಟೀಂ ಇಂಡಿಯಾ ಕ್ರಿಕೆಟಿಗ ಹರ್ಭಜನ್ ಸಿಂಗ್ ಮತ್ತು ಯುವರಾಜ್ ಸಿಂಗ್ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿತ್ತು.


ಈ ಬಗ್ಗೆ ಪ್ರತಿಕ್ರಿಯಿಸಿರುವ ಭಜಿ ಇಲ್ಲಿ ಧರ್ಮದ ಪ್ರಶ್ನೆ ಬರುವುದಿಲ್ಲ. ಮಾನವೀಯತೆಯ ದೃಷ್ಟಿಯಿಂದ ಸಹಾಯಕ್ಕೆ ಮನವಿ ಮಾಡಿದ್ದೆವು ಎಂದು ಸಮರ್ಥಿಸಿಕೊಂಡಿದ್ದಾರೆ.

‘ಧರ್ಮದ ಪ್ರಶ್ನೆಯಲ್ಲ. ಕೇವಲ ಮಾನವೀಯತೆಯ ಪ್ರಶ್ನೆ. ಅದಕ್ಕಾಗಿ ಇದನ್ನು ಮಾಡಿದೆವು. ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ. ಪ್ರೀತಿ ಹಂಚಿ, ವೈರಸ್ ನ್ನು ಅಲ್ಲ.ಪ್ರತಿಯೊಬ್ಬರ ಸುರಕ್ಷತೆಗಾಗಿ ಪ್ರಾರ್ಥಿಸೋಣ. ಎಲ್ಲರಿಗೂ ದೇವರು ಒಳ್ಳೆಯದು ಮಾಡಲಿ’ ಎಂದು ಭಜಿ ಟ್ವೀಟ್ ಮೂಲಕ ತಮ್ಮ ನಡತೆಯನ್ನು ಸಮರ್ಥಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ