ತಮಿಳು ಸಿನಿಮಾದಲ್ಲಿ ಬಣ್ಣಹಚ್ಚಲಿರುವ ಹರ್ಭಜನ್ ಸಿಂಗ್

ಮಂಗಳವಾರ, 15 ಅಕ್ಟೋಬರ್ 2019 (10:43 IST)
ಚೆನ್ನೈ: ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡಲು ಆರಂಭಿಸಿದ ಮೇಲೆ ಪಕ್ಕಾ ತಮಿಳು ಹುಡುಗನಾಗಿಬಿಟ್ಟಿದ್ದಾರೆ. ಇದೀಗ ಭಜಿ ತಮಿಳು ಸಿನಿಮಾವೊಂದರಲ್ಲಿ ಬಣ್ಣ ಹಚ್ಚಲಿದ್ದಾರಂತೆ!


ಮೂಲತಃ ಪಂಜಾಬಿಯಾಗಿರುವ ಭಜಿಗೆ ತಮಿಳು ಏನೇನೂ ಗೊತ್ತಿರಲಿಲ್ಲ. ಆದರೆ ಐಪಿಎಲ್ ನಲ್ಲಿ ಚೆನ್ನೈ ತಂಡ ಪ್ರತಿನಿಧಿಸಲು ಆರಂಭಿಸಿದ ಮೇಲೆ ಆ ಭಾಷೆಯನ್ನು ಅಲ್ಪ ಸ್ವಲ್ಪವಾದರೂ ಕಲಿಯಲು ಆರಂಭಿಸಿದ್ದಾರೆ.

ಇದೀಗ ತಮಿಳಿನ ಕಾಮಿಡಿ ಸಿನಿಮಾವೊಂದರಲ್ಲಿ ಭಜಿ ಅಭಿನಯಿಸಲಿದ್ದಾರಂತೆ. ಇದನ್ನು ಸ್ವತಃ ಬಜಿ ತಮ್ಮ ಟ್ವಿಟರ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಡಿಕ್ಕಿಲೂನಾ ಎನ್ನುವ ಸಿನಿಮಾ ಕಾರ್ತಿಕ್ ಯೋಗಿ ನಿರ್ದೇಶನದಲ್ಲಿ ಮೂಡಿಬರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ