ಈ ವರ್ಷದ ಐಪಿಎಲ್ ನಲ್ಲಿ ದುಬಾರಿಯಾಗಲಿದ್ದಾರಾ ಹಾರ್ದಿಕ್ ಪಾಂಡ್ಯ

ಭಾನುವಾರ, 29 ಅಕ್ಟೋಬರ್ 2017 (07:36 IST)
ಮುಂಬೈ: ಭಾರತೀಯ ಕ್ರಿಕೆಟ್ ನಲ್ಲಿ ಇದೀಗ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯರದ್ದೇ ಹವಾ. ಬ್ಯಾಟಿಂಗ್ ಗೂ ಸೈ, ಬೌಲಿಂಗ್ ಗೂ ಸೈ ಎನ್ನುವ ಇಂತಹ ಆಟಗಾರನನ್ನು ತನ್ನ ಬುಟ್ಟಿಯೊಳಗೆ ಹಾಕಲು ಐಪಿಎಲ್ ಫ್ರಾಂಚೈಸಿಗಳು ಹೊಂಚು ಹಾಕಿವೆ.

 
ಎರಡು ವರ್ಷಗಳ ಹಿಂದೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಕೇವಲ 10 ಲಕ್ಷ ರೂ. ಗೆ ಹರಾಜಾಗಿದ್ದ ಪಾಂಡ್ಯ ಈ ವರ್ಷ ಹೊಸದಾಗಿ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ದಾಖಲೆಯ ಮೊತ್ತಕ್ಕೆ ಹರಾಜಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್ ಗೆ ಮರಳುವುದು ಪಕ್ಕಾ ಆಗಿದ್ದು, ಈ ಎರಡು ತಂಡಗಳ ಜತೆಗೆ ಹಳೆಯ ತಂಡಗಳು ಪಾಂಡ್ಯಗಾಗಿ ದುಬಾರಿ ಬಿಡ್ಡಿಂಗ್ ಮಾಡುವುದು ಪಕ್ಕಾ ಎಂದೇ ಲೆಕ್ಕಾಚಾರ ಹಾಕಲಾಗಿದೆ. ಹೀಗಾಗಿ ಪಾಂಡ್ಯ ಈ ಬಾರಿಯ ದುಬಾರಿ ಆಟಗಾರನಾಗಬಹುದು ಎಂದೇ ಮಾರುಕಟ್ಟೆ ತಜ್ಞರು ಲೆಕ್ಕ ಹಾಕಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ