ಜಿಂಬಾಬ್ವೆಯಲ್ಲಿ ಹಿಂದಿನ ಚೊಚ್ಚಲ ಇನ್ನಿಂಗ್ಸ್ನಲ್ಲಿ 71 ರನ್ ಗಳಿಸಿದ್ದ ಪಾಂಡೆ, ಆಸ್ಟ್ರೇಲಿಯಾದಲ್ಲಿ ಮೂರು ಏಕದಿನ ಪಂದ್ಯಗಳನ್ನು ಆಡಿದ್ದರು. ಸಿಡ್ನಿಯಲ್ಲಿ ಪಂದ್ಯ ಗೆಲುವಿನ 104 ರನ್ ಗಳಿಸಿ ಭಾರತಕ್ಕೆ ಏಕಮಾತ್ರ ಜಯವನ್ನು ತಂದಿತ್ತಿದ್ದರು. ಮೂರು ಪಂದ್ಯಗಳ ಏಕದಿನ ಸರಣಿಗೆ ಮುನ್ನ, ಪಾಂಡೆ ಕಳೆದ ವರ್ಷ ತಮ್ಮ ಕನಸನ್ನು ನನಸು ಮಾಡಿಕೊಂಡ ಕ್ಷಣವನ್ನು ಮೆಲಕು ಹಾಕಿದರು.
ಇದು ಪುನಃ ಹೊಸ ಆರಂಭವಾಗಲಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ ಜಿಂಬಾಬ್ವೆಯಲ್ಲಿ ನಾನು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದೆ. ಇಲ್ಲಿಗೆ ಪುನಃ ಆಗಮಿಸಿ ಆಗಿನ ನೆನಪುಗಳನ್ನು ಮೆಲಕು ಹಾಕಿ, ಭಾರತಕ್ಕೆ ರನ್ ಸ್ಕೋರ್ ಮಾಡುವುದು ನನ್ನ ಗುರಿಯಾಗಿದೆ ಎಂದು ಅವರು ಹೇಳಿದರು.
ಸಿಡ್ನಿಯಲ್ಲಿ ಶತಕ ಬಾರಿಸಿದ್ದರೂ ಪಾಂಡೆ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಬೇಕಿದೆ. ಭಾರತಕ್ಕೆ ಇನ್ನಷ್ಟು ಪಂದ್ಯಗಳನ್ನು ಗೆಲ್ಲಿಸಿಕೊಡುವ ಮೂಲಕ ಕಾಯಂ ಸ್ಥಾನವನ್ನು ಪಡೆಯಲು ಅವರು ಬಯಸಿದ್ದಾರೆ. ನನ್ನ ಗುರಿ ಪ್ರದರ್ಶನ ನೀಡುವುದಾಗಿದ್ದು, ಭಾರತದ 11 ಆಟಗಾರರ ತಂಡದಲ್ಲಿ ಹೊಂದಿಕೆಯಾಗಿ ಕಾಯಂ ಆಟಗಾರನಾಗುವುದು ತಮ್ಮ ಗುರಿ ಎಂದು ಪಾಂಡೆ ಹೇಳಿದರು.