ಭಾರತ ಕ್ರಿಕೆಟ್ ತಂಡದ ಆಟಗಾರ ರಾಹುಲ್ ಶರ್ಮಾಗೆ ಬ್ಲಾಕ್ ಮೇಲ್; ಹಣ ನೀಡದಿದ್ದರೆ ವಿಡಿಯೋ ಬಿಡುಗಡೆಯ ಬೆದರಿಕೆ!

ಗುರುವಾರ, 4 ಜನವರಿ 2018 (07:03 IST)
ಮುಂಬೈ : ಭಾರತ ಕ್ರಿಕೆಟ್ ತಂಡದ ಆಟಗಾರ ಪಂಜಾಬ್ ನ ಲೆಗ್ ಸ್ಪಿನ್ನರ್ ರಾಹುಲ್ ಶರ್ಮಾ ಅವರು ತಮಗೆ ಒಬ್ಬ ವ್ಯಕ್ತಿ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.


ಅವರು ಈ ಬಗ್ಗೆ ಟ್ವೀಟರ್ ನಲ್ಲಿ ನಮೂದಿಸಿದ್ದಾರೆ. ‘ಜನರಿಗೆ ಏನಾಗಿದೆ ಎಂಬುದು ನನಗೆ ಗೊತ್ತಿಲ್ಲ. ಜನರು ದುಡ್ಡಿಗಾಗಿ ಏನೆಲ್ಲಾ ಮಾಡುತ್ತಾರೆ. ಪ್ರತಿಯೊಬ್ಬರ ಬದುಕು ಮುಖ್ಯ. ಯಾರೋ ಒಬ್ಬ ನಿನ್ನ ವಿಡಿಯೋವನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸುವೆ ಎಂದು ನನ್ನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾನೆ. ಆ ಮೂಲಕ ನನ್ನ ಬದುಕು ಮತ್ತು ಜೀವನವನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾನೆ. ಓ ದೇವರೆ, ಇಂತಹ ದರಿದ್ರ ಜನರಿಂದ ನನ್ನನ್ನು ರಕ್ಷಿಸು’ ಎಂದು ತಮ್ಮ ಟ್ವೀಟರ್ ನಲ್ಲಿ ಬರೆದಿದ್ದಾರೆ.


ರಾಹುಲ್ ಶರ್ಮಾ ಅವರು ಯಾವ ವಿಡಿಯೋ, ಅದರಲ್ಲಿ ಏನಿದೆ ಎಂಬುದರ ಬಗ್ಗೆ ಟ್ವೀಟರ್ ನಲ್ಲಿ ನಮೂದಿಸಿಲ್ಲ. ಇವರು 2011ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಸೇರ್ಪಡೆಗೊಂಡು, ಭಾರತ ಪರ 4 ಏಕದಿನ ಹಾಗು 2 ಟಿ20 ಪಂದ್ಯಗಳನ್ನಾಡಿದ್ದಾರೆ. 

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ