ರಾಯಲ್ ಚಾಲೆಂಜರ್ಸ್ ವಿರಾಟ್ ಕೊಹ್ಲಿ ಸಾರಥ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದು, ಕೊಹ್ಲಿ ಸತತ ದಾಖಲೆಗಳನ್ನು ಮುರಿದು ಬೆಂಗಳೂರು ತಂಡಕ್ಕೆ ಗೆಲುವು ದಕ್ಕಿಸಿಕೊಟ್ಟಿದ್ದಾರೆ. ಆದರೆ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ತಮ್ಮ ತಂಡದ ಬೌಲರುಗಳು ಕೂಡ ತಂಡ ತಿರುವು ತೆಗೆದುಕೊಳ್ಳುವುದಕ್ಕೆ ನಿರ್ಣಾಯಕ ಪಾತ್ರ ವಹಿಸಿದ್ದಾರೆಂದು ಹೇಳಿದ್ದಾರೆ.
ಕಳೆದ ಎರಡು ಪಂದ್ಯಗಳಲ್ಲಿ ಬೌಲರುಗಳು ಉತ್ತಮ ಕಾರ್ಯನಿರ್ವಹಿಸಿದ್ದಾರೆ. ಮುಂಚಿನ ಪಂದ್ಯಗಳಲ್ಲಿ ಬೌಲಿಂಗ್ ಕಳವಳಕಾರಿಯಾಗಿದ್ದು, ಸಂಯೋಜನೆ ಸಮಸ್ಯೆ ಕೂಡ ಎದುರಿಸುತ್ತಿದ್ದೆವು. ಈಗ ಸಂಯೋಜನೆ ಸರಿಯಾಗಿದ್ದು, ನಮ್ಮ ಬೌಲಿಂಗ್ ಸುಧಾರಿಸಿಕೊಂಡಿದ್ದೇವೆ. ದುರ್ಬಲ ಬೌಲಿಂಗ್ ಲೈನ್ ಅಪ್ ಎಂಬ ಹಣೆ ಪಟ್ಟಿಯನ್ನು ಕೂಡ ಅಳಿಸಿಹಾಕಿದ್ದೇವೆ ಎಂದು ಪಂದ್ಯದ ಬಳಿಕದ ಪತ್ರಿಕಾಗೋಷ್ಠಿಯಲ್ಲಿ ಚಾಹಲ್ ಹೇಳಿದರು.