ವರ್ಣಬೇಧ ಆರೋಪ ಮಾಡಿದ್ದ ಡ್ಯಾರೆನ್ ಸಾಮಿ-ಇಶಾಂತ್ ಶರ್ಮಾ ಸ್ನೇಹಿತರು

ಭಾನುವಾರ, 14 ಜೂನ್ 2020 (09:12 IST)
ಮುಂಬೈ: ಸನ್ ರೈಸರ್ಸ್ ಹೈದರಾಬಾದ್ ಐಪಿಎಲ್ ತಂಡದಲ್ಲಿ ಆಡುವ ವೇಳೆಗೆ ತನ್ನ ಮೇಲೆ ವರ್ಣಬೇಧ ಮಾಡಲಾಗಿದೆ ಎಂದು ಪರೋಕ್ಷವಾಗಿ ಇಶಾಂತ್ ಶರ್ಮಾ ಮೇಲೆ ಆರೋಪ ಮಾಡಿದ್ದ ವಿಂಡೀಸ್ ಕ್ರಿಕೆಟಿಗ ಡ್ಯಾರೆನ್ ಸಾಮಿ ನಡುವೆ ಶತ್ರುತ್ವವಿಲ್ಲ ಎಂದು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಹೇಳಿದ್ದಾರೆ.


ಐಪಿಎಲ್ ತಂಡದಲ್ಲಿ ನನ್ನನ್ನು ಕಾಲೂ ಎಂದು ವರ್ಣದ ಆಧಾರದಲ್ಲಿ ಕರೆಯಲಾಗುತ್ತದೆ ಎಂದು ಸ್ಯಾಮಿ ಆರೋಪಿಸಿದ್ದರು. ಈ ಆರೋಪವನ್ನು ಅವರು ಇಶಾಂತ್ ಶರ್ಮಾ ಹಿಂದೊಮ್ಮೆ ಪ್ರಕಟಿಸಿದ್ದ ಫೋಟೋವನ್ನು ಉಲ್ಲೇಖಿಸಿ ಹೇಳಿದ್ದರು.

ಆದರೆ ವೈಯಕ್ತಿಕವಾಗಿ ಇಶಾಂತ್ ಮೇಲೆ ಸ್ಯಾಮಿಗೆ ಧ್ವೇಷವಿಲ್ಲ. ಅವರಿಬ್ಬರೂ ಸ್ನೇಹಿತರು. ಇಬ್ಬರಿಗೂ ಪರಸ್ಪರ ಗೌರವವಿದೆ. ತಂಡದ ಸಭೆಗಳಲ್ಲಿ ಯಾವತ್ತೂ ಸ್ಯಾಮಿ ತಮ್ಮ ಸಹ ಆಟಗಾರರ ಮೇಲೆ ದೂರು ಹೇಳಿರಲಿಲ್ಲ’ ಎಂದು ಪಠಾಣ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ