ನಾಳಿನ ಪಂದ್ಯದಲ್ಲಿ ಜೇಮ್ಸ್ ಆಂಡರ್ಸನ್ ಆಡಲ್ಲ. ಕಾರಣ ಏನು ಗೊತ್ತಾ?
ಚೆನ್ನೈ: ಕಳೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿಯನ್ನು ಟೀಕಿಸಿದ್ದ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಭಾರೀ ಟೀಕೆಗೆ ಒಳಗಾಗಿದ್ದರು. ನಾಳಿನ ಪಂದ್ಯದಲ್ಲಿ ಅವರು ಆಡುವುದೇ ಇಲ್ಲವಂತೆ. ಕಾರಣವೇನು ಗೊತ್ತಾ?
ಕಳೆದ ಪಂದ್ಯದ ಜಗಳವಂತೂ ಅಲ್ಲ ಬಿಡಿ. ಆಂಡರ್ಸನ್ ಗೆ ಮತ್ತೆ ಗಾಯ ಮರುಕಳಿಸಿದೆ. ಸರಣಿಯ ಮೊದಲ ಪಂದ್ಯದಲ್ಲೂ ಭುಜದ ಗಾಯದ ಕಾರಣದಿಂದ ಆಂಡರ್ಸನ್ ಆಡಿರಲಿಲ್ಲ. ನಂತರದ ಪಂದ್ಯಗಳಿಗೆ ಅವರು ಮರಳಿದರೂ, ಅಂತಹ ಪರಿಣಾಮ ಬೀರಲಿಲ್ಲ.
ಕಾಲು ಮತ್ತು ಭುಜದ ನೋವಿನಿಂದ ಬಳಲುತ್ತಿರುವ ಕಾರಣ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಹೇಗಿದ್ದರೂ ಈ ಪಂದ್ಯಕ್ಕೆ ಅಂತಹ ಮಹತ್ವವಿಲ್ಲದ ಕಾರಣ ಅವರಿಗೆ ತೊಂದರೆ ಕೊಡುವುದು ಬೇಡ ಎಂದು ನಿರ್ಧರಿಸಲಾಗಿದೆ ಎಂದು ನಾಯಕ ಅಲೆಸ್ಟರ್ ಕುಕ್ ದೃಢಪಡಿಸಿದ್ದಾರೆ.