ಭಾರೀ ಆಘಾತವೊಂದರಿಂದ ಬಚವಾದ ಇಂಗ್ಲೆಂಡ್ ಕ್ರಿಕೆಟ್ ತಂಡ!
ಇಂಗ್ಲೆಂಡ್ ತಂಡದ ಪ್ರಮುಖ ವೇಗಿ ಜೇಮ್ಸ್ ಆಂಡರ್ಸನ್ ತಮ್ಮ ಸಹ ಆಟಗಾರ ಸ್ಟುವರ್ಟ್ ಬ್ರಾಡ್ ಜತೆಗೆ ಗಾಲ್ಫ್ ಆಡುತ್ತಿದ್ದರು. ಈ ವೇಳೆ ಬಾಲ್ ತುಂಬಾ ದೂರಕ್ಕೆ ಹಾಕಬೇಕೆಂಬ ಹಠದಿಂದ ಎರ್ರಾ ಬಿರ್ರಿ ಸ್ಟಿಕ್ ಬೀಸಿದ್ದರು.
ಆದರೆ ಬಾಲ್ ಮೇಲಕ್ಕೆ ಚಿಮ್ಮಿ ಮರವೊಂದಕ್ಕೆ ತಾಗಿ ಮರಳಿ ಆಂಡರ್ಸನ್ ಮುಖಕ್ಕೆ ರಭಸವಾಗಿ ಹೊಡೆಯುತ್ತಿತ್ತು. ಆದರೆ ಕೂದಲೆಳೆಯಲ್ಲಿ ಆಂಡರ್ಸನ್ ಇದರಿಂದ ತಪ್ಪಿಸಿಕೊಂಡರು. ಒಂದು ವೇಳೆ ಗಾಯ ಗಂಭೀರವಾಗಿದ್ದರೆ ಎರಡನೇ ಟೆಸ್ಟ್ ನಿಂದ ಹೊರಗುಳಿಯಬೇಕಾಗಿತ್ತು. ಆದರೆ ಈಗ ಅಪಾಯದಿಂದ ಪಾರಾಗಿದ್ದಾರೆ.