ತಪ್ಪುಗಳ ಮೇಲೆ ತಪ್ಪು ಮಾಡುತ್ತಿರುವ ವಿರಾಟ್ ಕೊಹ್ಲಿ: ನ್ಯೂಜಿಲೆಂಡಿಗರಿಗೆ ಖುಷಿಯೋ ಖುಷಿ

ಸೋಮವಾರ, 2 ಮಾರ್ಚ್ 2020 (09:01 IST)
ಕ್ರಿಸ್ಟ್ ಚರ್ಚ್: ನ್ಯೂಜಿಲೆಂಡ್ ನಲ್ಲಿ ವಿರಾಟ್ ಕೊಹ್ಲಿಗೆ ಯಾಕೋ ಯಶಸ್ಸು ಎನ್ನುವುದು ಮರೀಚಿಕೆಯಾಗಿದೆ. ರನ್ ಮೆಷಿನ್ ಎಂದೇ ಬೀಗುತ್ತಿದ್ದ ಕೊಹ್ಲಿಯ ಹುಳುಕುಗಳನ್ನು ಚೆನ್ನಾಗಿಯೇ ಅರಿತು ವ್ಯವಸ್ಥಿತವಾಗಿಯೇ ಅವರನ್ನು ಕಟ್ಟಿಹಾಕುವಲ್ಲಿ ಕಿವೀಸ್ ಬೌಲರ್ ಗಳು ಯಶಸ್ವಿಯಾಗಿದ್ದಾರೆ.


ಆದರೆ ಕೊಹ್ಲಿ ಮಾತ್ರ ತಮ್ಮ ಬ್ಯಾಟಿಂಗ್ ಗೆ ಯಾವುದೇ ತೊಂದರೆಯಾಗಿಲ್ಲ ಎನ್ನುತ್ತಲೇ ಇದ್ದಾರಷ್ಟೇ ಹೊರತು, ತಮ್ಮ ಘನತೆಗೆ ತಕ್ಕ ಆಟವಾಡದೇ ತಪ್ಪುಗಳ ಮೇಲೆ ತಪ್ಪು ಮಾಡುತ್ತಿದ್ದಾರೆ.

ಹಿಂದೆ ಇಂಗ್ಲೆಂಡ್ ಸರಣಿಯಲ್ಲಿ ಕೊಹ್ಲಿ ಈ ರೀತಿ ಸತತ ವೈಫಲ್ಯ ಕಂಡಿದ್ದು ಬಿಟ್ಟರೆ, ಸದ್ಯ ಯಾವತ್ತೂ ಇಷ್ಟು ಸುದೀರ್ಘ ಅವಧಿಗೆ ಸೋಲು ಕಂಡಿರಲಿಲ್ಲ. ಹೀಗಾಗಿ ಸಹಜವಾಗಿಯೇ ಕಿವೀಸ್ ಖುಷಿಯಾಗಿದೆ. ‘ಕೊಹ್ಲಿ ಉತ್ತಮ ಆಟಗಾರ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಅವರು ತಪ್ಪುಗಳ ಮೇಲೆ ತಪ್ಪು ಮಾಡುವುದನ್ನು ನೋಡುವುದೇ ಮಜಾ. ಅವರಿಗೆ ಬೌಂಡರಿ ಗಳಿಸುವ ಅವಕಾಶ ನಿರಾಕರಿಸಿ ಪ್ಯಾಡ್ ಗೇ ಬಾಲ್ ಎಸೆಯುತ್ತಿದ್ದೇವೆ. ಇದರಿಂದ ಅವರಿಗೆ ಹಿನ್ನಡೆಯಾಗುತ್ತಿರುವುದು ನಮಗೆ ಖುಷಿಯಾಗಿದೆ’ ಎಂದು ವೇಗಿ ಟ್ರೆಂಟ್ ಬೌಲ್ಟ್ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ