ಅಭ್ಯಾಸ ಮಾಡುವಾಗ ಗಾಯ ಮಾಡಿಕೊಂಡ ಕೆಎಲ್ ರಾಹುಲ್

ಸೋಮವಾರ, 22 ಜನವರಿ 2018 (09:42 IST)
ಜೊಹಾನ್ಸ್ ಬರ್ಗ್: ಟೀಂ ಇಂಡಿಯಾ ಮೂರನೇ ಟೆಸ್ಟ್ ಪಂದ್ಯಕ್ಕೆ ನಿನ್ನೆಯಿಂದ ಅಭ್ಯಾಸ ಆರಂಭಿಸಿದೆ. ಮೊದಲ ದಿನವೇ ನಾಲ್ಕು ಗಂಟೆಗಳ ಕಾಲ ನಿರಂತರ ಅಭ್ಯಾಸ ನಡೆಸಿದ ಕೊಹ್ಲಿ ಪಡೆ ಫೀಲ್ಡಿಂಗ್ ಮತ್ತು ಬೌಲಿಂಗ್ ಕಡೆಗೆ ಹೆಚ್ಚಿನ ಗಮನ ನೀಡಿದೆ.
 

ಈ ನಡುವೆ ಮುರಳಿ ವಿಜಯ್ ಜತೆ ಅಭ್ಯಾಸ ನಡೆಸುವಾಗ ಕೆಎಲ್ ರಾಹುಲ್ ಗಾಯ ಮಾಡಿಕೊಂಡಿದ್ದಾರೆ.  ಅಶ್ವಿನ್ ಬೌಲಿಂಗ್ ನಲ್ಲಿ ರಾಹುಲ್ ಮೊಣಕಾಲಿಗೆ ಬಾಲ್ ತಗಲಿದೆ. ತಕ್ಷಣ ಐಸ್ ಪ್ಯಾಕ್ ಹಾಕಿಕೊಂಡ ರಾಹುಲ್ ಮತ್ತೆ ಬ್ಯಾಟಿಂಗ್ ಮುಂದುವರಿಸಿದ್ದಾರೆ. ಹೀಗಾಗಿ ಅವರ ಫಿಟ್ ನೆಸ್ ಬಗ್ಗೆ ಚಿಂತೆ ಪಡಬೇಕಾಗಿಲ್ಲ.

ಇನ್ನು ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್, ವಿಕೆಟ್ ಕೀಪರ್ ಮತ್ತು ಸ್ಲಿಪ್ ಫೀಲ್ಡರ್ ಗಳಿಗೆ ಕಠಿಣ ತಾಲೀಮು ನಡೆಸಿದರು. ಬಿಸಿಸಿಐ ಭಾರತ ತಂಡಕ್ಕೆ ನೆಟ್ಸ್ ನಲ್ಲಿ ನೆರವಾಗಲೆಂದೇ ಈ ಪಂದ್ಯಕ್ಕೆ ಮೊದಲು ಶ್ರಾದ್ದೂಲ್ ಠಾಕೂರ್ ಮತ್ತು ನವದೀಪ್ ಸೈನಿ ಎಂಬ ಇಬ್ಬರು ಸ್ಪೆಷಲಿಸ್ಟ್ ವೇಗಿಗಳನ್ನು ಕಳುಹಿಸಿದೆ. ಇವರೂ ಸತತವಾಗಿ ಭಾರತೀಯ ಬ್ಯಾಟ್ಸ್ ಮನ್ ಗಳಿಗೆ ಬೌಲ್ ಮಾಡಿ ಸಹಕರಿಸಿದ್ದಾರೆ. ಈ ಪಂದ್ಯ ಗೆದ್ದರಷ್ಟೇ ಭಾರತದ ನಂ.1 ಪಟ್ಟ ಉಳಿಯಲು ಸಾಧ್ಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ