ಸೆಹ್ವಾಗ್ ಕೋಚ್ ಆಗದೇ ಇರುವುದಕ್ಕೆ ಕೊಹ್ಲಿಯ ಮಾತುಗಳೇ ಕಾರಣವಾಯ್ತೇ?

ಮಂಗಳವಾರ, 18 ಜುಲೈ 2017 (08:38 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದೀಗ ವೀರೇಂದ್ರ ಸೆಹ್ವಾಗ್ ಕೆಂಗಣ್ಣಿಗೆ ಗುರಿಯಾಗುವುದಂತೂ ಸತ್ಯ. ಟೀಂ ಇಂಡಿಯಾ ಕೋಚ್ ಹುದ್ದೆಯ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ವೀರೂಗೆ ಆ ಹುದ್ದೆ ಕೈತಪ್ಪಲು ಕೊಹ್ಲಿ ಕಾರಣರಾದರೇ ಎಂಬ ಮಾತುಗಳು ಕೇಳಿಬರುತ್ತಿದೆ.


ಸೆಹ್ವಾಗ್ ಜತೆ ಉತ್ತಮ ಬಾಂಧವ್ಯವಿದ್ದೂ, ಒಂದೇ ಊರಿನವರಾದರೂ ಕೊಹ್ಲಿ ಯಾಕೆ ಹಾಗೆ ಮಾಡಿರಬಹುದು ಎಂಬ ಅಚ್ಚರಿ ಮೂಡದಿರದು. ಅದಕ್ಕೆ ಕಾರಣ ಸೆಹ್ವಾಗ್ ತಮ್ಮ ಜತೆಗೆ ತಮ್ಮದೇ ಆಯ್ಕೆಯ ಸಹಾಯಕ ಸಿಬ್ಬಂದಿಗಳನ್ನು ತರಲು ಬಯಸಿದ್ದು ಎಂದು ಕೆಲವು ಆಂಗ್ಲ ಪತ್ರಿಕೆಗಳು ವರದಿ ಮಾಡಿವೆ.

ಸೆಹ್ವಾಗ್ ತಮ್ಮ ಜತೆಗೆ ಫಿಸಿಯೋ ಆಗಿ ಅಮಿತ್ ತ್ಯಾಗಿ, ಸಹಾಯಕರಾಗಿ ಮಿಥುನ್ ಮನ್ಹಾಸ್ ರನ್ನು ತಂಡಕ್ಕೆ ಕರೆತರಲು ಬಯಸಿದ್ದರಂತೆ. ಆದರೆ ಕೊಹ್ಲಿ ಇದನ್ನು ವಿರೋಧಿಸಿದ್ದರು ಎನ್ನಲಾಗಿದೆ. ‘ನಿಮ್ಮ ಮೇಲೆ ನಮಗೆ ಅಪಾರ ಗೌರವವಿದೆ. ಆದರೆ ನಿಮ್ಮ ಜತೆಗೆ ಬರುವ ಸಹಾಯಕ ಸಿಬ್ಬಂದಿಗಳಿಗಾಗಿ ಈಗ ಇರುವ ಸಿಬ್ಬಂದಿಗಳನ್ನು ಬದಲಿಸಲಾಗದು’ ಎಂದು ಕೊಹ್ಲಿ ತಗಾದೆ ತೆಗೆದ ಕಾರಣ ಸೆಹ್ವಾಗ್ ಗೆ ಕೋಚ್ ಹುದ್ದೆ ಕೈ ತಪ್ಪಿತು ಎನ್ನಲಾಗುತ್ತಿದೆ.

ಇದನ್ನೂ ಓದಿ.. ಕರ್ಮಕಾಂಡ ಬಯಲಿಗೆಳೆದ ಡಿಐಜಿ ರೂಪಾ ವಿರುದ್ಧವೇ ಪ್ರತಿಭಟನೆ ಜೋರು

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ