ಇಂಗ್ಲೆಂಡ್ ವಿರುದ್ಧ ಕುಲದೀಪ್ ಯಾದವ್ ಟೀಂ ಇಂಡಿಯಾದ ಮಿಸ್ಟರ್ ಎಕ್ಸ್!

ಬುಧವಾರ, 1 ಆಗಸ್ಟ್ 2018 (09:18 IST)
ಲಂಡನ್: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಎದುರಾಳಿಗಳ ವೇಗದ ಅಸ್ತ್ರಕ್ಕೆ ಟೀಂ ಇಂಡಿಯಾ ಸ್ಪಿನ್ ಮೂಲಕ ಉತ್ತರಿಸಲು ಯೋಜನೆ ಹಾಕುತ್ತಿದೆ.

ಪಂದ್ಯಕ್ಕೆ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಉಪ ನಾಯಕ ಅಜಿಂಕ್ಯಾ ರೆಹಾನೆ, ಈ ಸರಣಿಯಲ್ಲಿ ಚಿನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ಭಾರತದ ಪಾಲಿಗೆ ಎಕ್ಸ್ ಫ್ಯಾಕ್ಟರ್ ಆಗಲಿದ್ದಾರೆ ಎಂದಿದ್ದಾರೆ. ಅವರು ಏಕದಿನ, ಟಿ20 ಯಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ಹೀಗಾಗಿ ಟೆಸ್ಟ್ ಸರಣಿಯಲ್ಲೂ ಕುಲದೀಪ್ ನಿರ್ಣಾಯಕರಾಗಲಿದ್ದಾರೆ ಎಂದಿದ್ದಾರೆ.

ಆದರೆ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾರನ್ನು ಮರೆಯುವಂತಿಲ್ಲ. ಅದರಲ್ಲೂ ಅಶ್ವಿನ್ ಬ್ಯಾಟಿಂಗ್ ನಲ್ಲೂ ಮಿಂಚಬಲ್ಲರು ಎಂದು ಹಿರಿಯ ಸ್ಪಿನ್ ಜೋಡಿಗೆ ರೆಹಾನೆ ಹೊಗಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ