ವಿರಾಟ್-ಅನುಷ್ಕಾ ಪುತ್ರಿಗೆ ಸರ್ಪೈಸ್ ಕೊಟ್ಟ ಲಂಡನ್ ಹೋಟೆಲ್

ಮಂಗಳವಾರ, 10 ಆಗಸ್ಟ್ 2021 (10:02 IST)
ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಪತ್ನಿ ಅನುಷ್ಕಾ ಶರ್ಮಾ, ಪುತ್ರಿ ವಮಿಕಾ ಕೂಡಾ ಜೊತೆಯಾಗಿದ್ದಾರೆ.


ಕಳೆದ ಒಂದು ತಿಂಗಳಿನಿಂದಲೂ ಹೆಚ್ಚು ಕೊಹ್ಲಿ ಜೊತೆಗೆ ಅನುಷ್ಕಾ ಹಾಗೂ ವಮಿಕಾ ಲಂಡನ್ ನಲ್ಲಿದ್ದಾರೆ. ಮೊನ್ನೆ ಟ್ರೆಂಟ್ ಬ್ರಿಡ್ಜ್ ನಲ್ಲಿ ನಡೆದ ಟೆಸ್ಟ್ ಪಂದ್ಯ ಮುಗಿಸಿ ಇದೀಗ ಟೀಂ ಇಂಡಿಯಾ ಲಾರ್ಡ್ಸ್ ಗೆ ಬಂದಿಳಿದಿದೆ.

ಎರಡನೇ ಟೆಸ್ಟ್ ಪಂದ್ಯಕ್ಕಾಗಿ ಲಂಡನ್ ನ ಮತ್ತೊಂದು ಹೋಟೆಲ್ ಗೆ ಬಂದಿಳಿದಿರುವ ಕೊಹ್ಲಿ-ಅನುಷ್ಕಾ ಜೊತೆಗೆ ವಮಿಕಾಗೆ ಅಲ್ಲಿನ ಹೋಟೆಲ್ ಸಿಬ್ಬಂದಿ ವಿಶೇಷವಾಗಿ ಸ್ವಾಗತ ಕೋರಿದ್ದಾರೆ. ಅದರಲ್ಲೂ ವಿಶೇಷವಾಗಿ ಪುಟಾಣಿ ವಮಿಕಾಗೆ ಒಂದು ಆಟಿಕೆ ಮತ್ತು ಅದಕ್ಕೆ ಬಲೂನ್ ಅಂಟಿಸಿ ಅದರ ಮೇಲೆ ‘ವೆಲ್ ಕಮ್ ಬ್ಯಾಕ್ ವಮಿಕಾ’ ಎಂದು ಬರೆದು ಸ್ವಾಗತ ನೀಡಿದ್ದಾರೆ. ಇದನ್ನು ಅನುಷ್ಕಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದು ನಿಜಕ್ಕೂ ಸರ್ಪೈಸ್ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ