ಶುಭ ಸುದ್ದಿ ಕೊಟ್ಟ ಟೀಂ ಇಂಡಿಯಾ ಪುರುಷ, ಮಹಿಳಾ ಕ್ರಿಕೆಟಿಗರು

ಭಾನುವಾರ, 25 ಫೆಬ್ರವರಿ 2018 (09:21 IST)
ನವದೆಹಲಿ: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆದ ಟಿ20 ಕ್ರಿಕೆಟ್ ಸರಣಿಯಲ್ಲಿ ಭಾರತದ ಪುರುಷ ಮತ್ತು ಮಹಿಳಾ ತಂಡಗಳೆರಡೂ ಜಯಭೇರಿ ಭಾರಿಸಿ ಸರಣಿ ಗೆಲುವು ಸಾಧಿಸಿದ್ದಾರೆ.
 

ಟೀಂ ಇಂಡಿಯಾ ಮಹಿಳೆಯರ ತಂಡ ಆಫ್ರಿಕಾ ವಿರುದ್ಧ ಅಂತಿಮ ಟಿ20 ಪಂದ್ಯದಲ್ಲಿ 54 ರನ್ ಗಳಿಂದ ಗೆದ್ದು ಸರಣಿಯನ್ನು 3-1 ಅಂತರದಿಂದ ತನ್ನದಾಗಿಸಿತು.

ಅತ್ತತ ಪುರುಷರ ತಂಡ ರೋಚಕವಾಗಿ ಅಂತಿಮ ಓವರ್ ನಲ್ಲಿ ಪಂದ್ಯ ಗೆದ್ದಿತು. ಗೆಲುವಿಗೆ 172 ರನ್ ಬೆನ್ನಟ್ಟಿದ ಆಫ್ರಿಕಾ ಇನ್ನೇನು ಗುರಿ ಮುಟ್ಟಿಯೇ ಬಿಟ್ಟಿತು ಎನ್ನುವಾಗ ಅಂತಿಮ ಓವರ್ ಎಸೆದ ಬುಮ್ರಾ 11 ರನ್ ಗಳಷ್ಟೇ ಬಿಟ್ಟುಕೊಟ್ಟು ಗೆಲುವು ಕೊಡಿಸಿದರು. ಆಫ್ರಿಕಾ 165 ರನ್ ಗಳಿಸಲಷ್ಟೇ ಶಕ್ತವಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ