ರಾಹುಲ್ ದ್ರಾವಿಡ್ ಹೇಳಿದ ಆ ಒಂದು ಮಾತು ಮಯಾಂಕ್ ಅಗರ್ವಾಲ್ ಗೆ ಸ್ಪೂರ್ತಿಯಾಗಿದ್ದು ಹೇಗೆ?

ಬುಧವಾರ, 20 ಮೇ 2020 (09:08 IST)
ಬೆಂಗಳೂರು: ಕನ್ನಡಿಗ, ಟೀಂ ಇಂಡಿಯಾ ಟೆಸ್ಟ್ ಆರಂಭಿಕ ಮಯಾಂಕ್ ಅಗರ್ವಾಲ್ ತಾವು ಭಾರತ ತಂಡಕ್ಕೆ ಆಯ್ಕೆಯಾದ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ಹೇಳಿದ ಮಾತೊಂದು ತನ್ನ ವೃತ್ತಿ ಜೀವನದಲ್ಲಿ ಯಾವ ರೀತಿ ಬದಲಾವಣೆ ತಂದಿತು ಎಂಬುದನ್ನು ಹೇಳಿಕೊಂಡಿದ್ದಾರೆ.


ಮಯಾಂಕ್ ಅಗರ್ವಾಲ್ 2017 ರಲ್ಲಿ ರಣಜಿ ಟ್ರೋಫಿಯಲ್ಲಿ ಸಾಕಷ್ಟು ರನ್ ಗಳಿಸಿಯೂ ಟೀಂ ಇಂಡಿಯಾಕ್ಕೆ ಆಯ್ಕೆಯಾಗದೇ ನಿರಾಸೆಯಲ್ಲಿದ್ದರಂತೆ. ಆ ಸಂದರ್ಭದಲ್ಲಿ ದ್ರಾವಿಡ್ ಬಳಿ ಅಳಲು ತೋಡಿಕೊಂಡಿದ್ದರಂತೆ.

ಆಗ ದ್ರಾವಿಡ್ ‘ರಣಜಿಯಲ್ಲಿ ನೀನು ಸಾಕಷ್ಟು ರನ್ ಗಳಿಸಿರುವೆ. ನಿನ್ನ ಕೆಲಸ ಇದು ಮಾತ್ರ. ನಿನ್ನಿಂದ ಎಷ್ಟು ಸಾಧ‍್ಯವೋ ಅಷ್ಟು ರನ್ ಗಳಿಸು. ಆಯ್ಕೆಯಾಗುವುದು ನಿನ್ನ ಕೈಯಲ್ಲಿಲ್ಲ. ಹೀಗಾಗಿ ಅದರ ಬಗ್ಗೆ ಚಿಂತಿಸಬೇಡ’ ಎಂದು ದ್ರಾವಿಡ್ ಹೇಳಿದ್ದರು. ಆದರೆ ಇದು ಸುಲಭವಾಗಿರಲಿಲ್ಲ.

ಹೀಗಾಗಿ ಇನ್ನೂ ಒಂದು ಮಾತು ಹೇಳಿದರು. ‘ಮುಂಬರುವ ಅಕ್ಟೋಬರ್, ನವಂಬರ್ ಗಿಂತ ಸೆಪ್ಟೆಂಬರ್ ವ್ಯತ್ಯಸ್ಥವಾಗಿರುತ್ತದೆ ಎಂದು ನೀನು ಯೋಚಿಸಿದರೆ ನೀನು ಋಣಾತ್ಮಕ ಚಿಂತನೆ ಮಾಡಲು ಶುರು ಮಾಡುವೆ. ಮನಸ್ಸನ್ನು ಋಣಾತ್ಮಕ ಚಿಂತನೆಗೆ ನೂಕಬೇಡ’ ಎಂದು ಹೇಳಿದ್ದರು. ಅವರ ಆ ಒಂದು ಮಾತು ನನಗೆ ಸ್ಪೂರ್ತಿಯಾಯಿತು ಎಂದು ಮಯಾಂಕ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ