ಲಂಚ ಕೊಡಲು ನಿರಾಕರಿಸಿದ ತಂದೆ: ತಂಡಕ್ಕೆ ಆಯ್ಕೆಯಾಗದ ವಿರಾಟ್ ಕೊಹ್ಲಿ!

ಮಂಗಳವಾರ, 19 ಮೇ 2020 (10:43 IST)
ಮುಂಬೈ: ಒಂದು ಕಾಲದಲ್ಲಿ ತಮ್ಮ ತಂದೆ ಲಂಚ ಕೊಡಲು ನಿರಾಕರಿಸಿದ್ದಕ್ಕೆ ತಾನು ತಂಡಕ್ಕೆ ಆಯ್ಕೆಯಾಗುವ ಅವಕಾಶ ಕಳೆದುಕೊಂಡ ಬಗ್ಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.


ಆಗಿನ್ನೂ ಕ್ರಿಕೆಟ್ ನಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಕಾಲ. ಯಾರೋ ತಂಡದಿಂದ ಅನಿವಾರ್ಯವಾಗಿ ಹೊರನಡೆಯಬೇಕಾದ ಪರಿಸ್ಥಿತಿ ಬಂದಾಗ ಆಯ್ಕೆಗಾರರು ನನ್ನ ತಂದೆಯ ಬಳಿ ಸ್ವಲ್ಪ ಹೆಚ್ಚು ಹಣ ನೀಡಿದರೆ ನಿಮ್ಮ ಮಗನನ್ನು ಆಯ್ಕೆ ಮಾಡುತ್ತೇವೆ ಎಂದಿದ್ದರಂತೆ.

‘ಅಪ್ಪ ತುಂಬಾ ಪ್ರಾಮಾಣಿಕ ಲಾಯರ್ ಆಗಿದ್ದರು. ಅವರು ಲಂಚ ಕೊಡಲು ಒಪ್ಪಲಿಲ್ಲ. ನನ್ನ ಮಗನಿಗೆ ಸಾಧನೆಯ ಆಧಾರದಲ್ಲಿ ತಂಡದಲ್ಲಿ ಸ್ಥಾನ ಕೊಡುವುದಾದರೆ ಓಕೆ. ಲಂಚ ಕೊಡಲು ನಾನು ಸಿದ್ಧವಿಲ್ಲ ಎಂದಿದ್ದರು. ಅದೇ ಕಾರಣಕ್ಕೆ ನಾನು ಆಯ್ಕೆಯಾಗಲಿಲ್ಲ. ಆ ದಿನವಿಡೀ ನಾನು ಅತ್ತಿದ್ದೆ’ ಎಂದು ಕೊಹ್ಲಿ ಇನ್ ಸ್ಟಾಗ್ರಾಂ ಲೈವ್ ನಲ್ಲಿ ಮೆಲುಕು ಹಾಕಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ