ಚೆಂಡಿಗೆ ಹೊಳಪು ನೀಡಲು ಜೊಲ್ಲು ಬೇಡ, ಬೆವರು ಓಕೆ ಎಂದ ಅನಿಲ್ ಕುಂಬ್ಳೆ ನೇತೃತ್ವದ ಸಮಿತಿ

ಮಂಗಳವಾರ, 19 ಮೇ 2020 (09:55 IST)
ಮುಂಬೈ: ಕೊರೋನಾ ಭೀತಿಯಿಂದಾಗಿ ಇನ್ನು ಮುಂದಿನ ದಿನಗಳಲ್ಲಿ ಚೆಂಡಿಗೆ ಹೊಳಪು ನೀಡಲು ಆಟಗಾರರು ಜೊಲ್ಲು ಬಳಸುವುದನ್ನು ನಿಷೇಧಿಸಲಾಗಿದೆ. ಅದರ ಬದಲು ಬೆವರಿನಿಂದ ಒರೆಸಿಕೊಳ್ಳಬಹುದು ಎಂದು ಐಸಿಸಿಯ ಕ್ರಿಕೆಟ್ ಸಮಿತಿ ಹೇಳಿದೆ.


ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಕ್ರಿಕೆಟ್ ಸಮಿತಿ ಇಂತಹದ್ದೊಂದು ನಿಯಮ ಜಾರಿಗೆ ತರಲು ಆದೇಶಿಸಿದೆ. ಕೊರೋನಾ ಭೀತಿಯಿಂದಾಗಿ ಚೆಂಡಿಗೆ ಹೊಳಪು ಮೂಡಿಸಲು ಜೊಲ್ಲು ಬಳಸಬೇಕೇ ಅಥವಾ ಕೃತಕ ರಾಸಾಯನಿಕ ಬಳಕೆಯನ್ನೇ ಕಾನೂನುಬದ್ಧಗೊಳಿಸಬೇಕೇ ಎಂಬ ವಿಚಾರದಲ್ಲಿ ಚರ್ಚೆಗಳಾಗುತ್ತಿತ್ತು.

ಇದೀಗ ಮಧ್ಯಂತಹ ಸಭೆ ನಡೆಸಿದ ಅನಿಲ್ ಕುಂಬ್ಳೆ ನೇತೃತ್ವದ ಸಮಿತಿ ಜೊಲ್ಲು ಬೇಡ, ಬೆವರು ಹಚ್ಚುವುದಕ್ಕೆ ತೊಂದರೆಯಿಲ್ಲ ಎಂದಿದೆ. ಸದ್ಯಕ್ಕೆ ಆಟಗಾರರ ಅರೋಗ್ಯದ ದೃಷ್ಟಿಯಿಂದ ಇಂತಹದ್ದೊಂದು ನಿರ್ಧಾರ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ಕ್ರಿಕೆಟ್ ಸಮಿತಿ ಅಭಿಪ್ರಾಯಪಟ್ಟಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ