ರೋಹಿತ್ ಶರ್ಮಾಗೆ ತಿರುಗೇಟು ನೀಡಿದ ಖುಷಿಯಲ್ಲಿ ಪಾಕ್ ಬೌಲರ್
ಬಹುಶಃ ಈಗ ರೋಹಿತ್ ಅಭಿಪ್ರಾಯ ಬದಲಾಗಿರಬಹುದು ಎಂದು ಅಮೀರ್ ಹೇಳಿಕೊಂಡಿದ್ದಾರೆ. ರೋಹಿತ್ ಹೀಗೆ ಕಾಮೆಂಟ್ ಮಾಡಿದ್ದಾಗ ಅಮೀರ್ ಗೆ ತೀರಾ ಬೇಸರವಾಗಿತ್ತಂತೆ. ಇದು ಅವರನ್ನು ಕಾಡುತ್ತಲೇ ಇತ್ತಂತೆ. ಕೊನೆಗೂ ಈಗ ಸೇಡು ತೀರಿಸಿಕೊಂಡ ಖುಷಿಯಲ್ಲಿ ಅಮೀರ್ ಇದ್ದಾರಂತೆ. ಇದನ್ನು ಒಂದು ಸಂದರ್ಶನದಲ್ಲಿ ಅವರೇ ಹೇಳಿಕೊಂಡಿದ್ದಾರೆ.