ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಿಂದ ಟೀಂ ಇಂಡಿಯಾದ ಸ್ಟಾರ್ ಆಟಗಾರ ಔಟ್!

ಭಾನುವಾರ, 20 ಡಿಸೆಂಬರ್ 2020 (09:05 IST)
ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮುಂದಿನ ಟೆಸ್ಟ್ ಪಂದ್ಯಗಳಿಂದ ಟೀಂ ಇಂಡಿಯಾದ ಪ್ರಮುಖ ವೇಗಿ ಮೊಹಮ್ಮದ್ ಶಮಿ ಹೊರಬಿದ್ದಿದ್ದಾರೆ.


ಮೊದಲ ಟೆಸ್ಟ್ ನ ದ್ವಿತೀಯ ಇನಿಂಗ್ಸ್ ನಲ್ಲಿ ಮೊಹಮ್ಮದ್ ಶಮಿ ಬ್ಯಾಟಿಂಗ್ ಮಾಡುತ್ತಿದ್ದಾಗ ಪ್ಯಾಟ್ ಕ್ಯುಮಿನ್ಸ್ ಎಸೆತ ಅವರ ಕೈಗೆ ತಾಗಿತ್ತು. ಇದರಿಂದಾಗಿ ಕೈಗೆ ತೀವ್ರ ಗಾಯವಾಗಿದೆ. ಹೀಗಾಗಿ ಸರಣಿಯ ಉಳಿದ ಪಂದ್ಯಗಳಲ್ಲಿ ಅವರು ಆಡಲು ಸಾಧ‍್ಯವಾಗದು ಎಂದು ವೈದ್ಯಕೀಯ ವರದಿ ಹೇಳಿದೆ. ಈಗಾಗಲೇ ಸೋತಿರುವ ಟೀಂ ಇಂಡಿಯಾಗೆ ಈಗ ಶಮಿ ಅನುಪಸ್ಥಿತಿ ಹೊಡೆತ ನೀಡಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ